ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆ: ವಿದ್ಯಾರ್ಥಿಗಳು ಸಂಕಷ್ಟದಲ್ಲಿ
ಮೊಗ್ರಾಲ್: ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿ ಸಿರುವುದು ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗೆ ಕಾರಣವಾಗಿದೆ. ಪರೀಕ್ಷೆ ಮುಗಿಯುವವರೆಗೆ ರಸ್ತೆ ಮುಚ್ಚುಗ ಡೆಗೊಳಿಸಕೂಡದೆಂಬ ಬೇಡಿಕೆಯನ್ನು ಸಂಬಂಧಪಟ್ಟವರು ನಿರ್ಲಕ್ಷಿಸಿ ದ್ದಾರೆಂದು ದೂರಲಾಗಿದೆ. ರಸ್ತೆ ಮುಚ್ಚುಗಡೆಗೊಳಿಸಿ ರುವುದರಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ.
ಮೊಗ್ರಾಲ್ ಪೇಟೆಯ ಸರ್ವೀಸ್ ರಸ್ತೆಯನ್ನು ಕಾಮಗಾರಿಯ ಹೆಸರಲ್ಲಿ ಬುಧವಾರದಿಂದ ಒಂದು ವಾರಕ್ಕೆ ಮುಚ್ಚಲಾಗಿದೆ. ಶಾಲಾ ಪರೀಕ್ಷೆ, ರಮ್ಜಾನ್ ವ್ರತಾಚರಣೆ, ಮಿತಿಮೀರಿದ ಉಷ್ಣತೆ ಮೊದಲಾದವುಗಳನ್ನು ಪರಿಗಣಿಸಿ ಮೊಗ್ರಾಲ್‌ನಲ್ಲಿ ಸರ್ವೀಸ್ ರಸ್ತೆ ಮುಚ್ಚುಗಡೆಗೊಳಿಸಿರುವುದನ್ನು ಮರು ಪರಿಶೀಲಿಸಬೇಕೆಂದು ನಾಗರಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಒತ್ತಾಯಿಸಿವೆ. ರಸ್ತೆ ಮುಚ್ಚುಗಡೆಗೊಳಿಸಿರುವುದರಿಂದ ಕಾಸರಗೋಡು ಭಾಗದಿಂದ ಬರುವ ವಿದ್ಯಾರ್ಥಿಗಳು ಕೊಪ್ಪಳದಲ್ಲಿ ಇಳಿದು ೩೦೦ ಮೀಟರ್ ನಡೆದು ಹೋಗಿ ಶಾಲೆಗೆ ತಲುಪಬೇಕಾಗಿದೆ.