ಮೊಗ್ರಾಲ್ ಪುತ್ತೂರು ನಿವಾಸಿ ದುಬಾಯಿಯಲ್ಲಿ ಮೃತ್ಯು
ಕಾಸರಗೋಡು: ಮೊಗ್ರಾಲ್ ಪುತ್ತೂರು ನಿವಾಸಿ ಶಂಸುದ್ದೀನ್ ಪಾದಾರ (50) ಎಂಬವರು ದುಬಾಯಿಯಲ್ಲಿ ಮೃತಪಟ್ಟರು. ಅಸೌಖ್ಯ ಬಾಧಿಸಿದ್ದ ಇವರನ್ನು ದುಬಾಯಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಕೆಎಂಸಿಸಿ ಕಾರ್ಯಕರ್ತರ ನೇತೃತ್ವದಲ್ಲಿ ಮೃತದೇಹ ಊರಿಗೆ ತರಲು ಸಿದ್ಧತೆ ನಡೆಯುತ್ತಿದೆಯೆಂದು ತಿಳಿದುಬಂದಿದೆ. ಮೊಯ್ದೀನ್ ಕುಂಞಿ-ನಬೀಸ ದಂಪತಿಯ ಪುತ್ರನಾದ ಮೃತರು ಪತ್ನಿ ಆಯಿಶ, ಮಕ್ಕಳಾದ ಶಮೀಂ, ಶೈಶಾದ್, ಸಲ್ವ, ಸಜ್ಜಾ, ಸಹೋದರ-ಸಹೋದರಿ ಯರಾದ ಮುಂತಾಸ್, ಯೂನಸ್, ರಫೀಕ್, ಶಾಫಿ, ನೌಶಾದ್, ಮೆಹ ರುನ್ನೀಸ, ಫಯಾಸ, ಮುನ್ಶೀಫ್, ಸರ್ಫಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.