ಯುವಕನಿಗೆ ಆಕ್ರಮಣ: ಕಠಿಣ ಕ್ರಮಕ್ಕೆ ಯೂತ್ ಲೀಗ್ ಆಗ್ರಹ
ಕಾಸರಗೋಡು: ಎರಿಯಾಲಿನ ಬಾಸಿತ್ ಎಂಬ ಯುವಕನನ್ನು ಆಕ್ರಮಣಗೈದ ಘಟನೆಯಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಯೂತ್ ಲೀಗ್ ಮಧೂರು ಪಂಚಾಯತ್ ಸಮಿತಿ ಹೇಳಿಕೆಯಲ್ಲಿ ಆಗ್ರಹಿಸಿದೆ. ಮೀಪುಗುರಿ ಪಾರೆಕಟ್ಟೆ ರಸ್ತೆಯಲ್ಲಿ ನಡೆದ ಆಕ್ರಮಣದಲ್ಲಿ ಬಾಸಿತ್ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅಕ್ರಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಯೂತ್ ಲೀಗ್ ಆಗ್ರಹಿಸಿದೆ.