ಯುವಕನಿಗೆ ತಂಡದಿಂದ ಹಲ್ಲೆ: ಗಾಯಾಳು ಆಸ್ಪತ್ರೆಯಲ್ಲಿ
ಸೀತಾಂಗೋಳಿ: ಗಣೇಶೋ ತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದ ಯುವಕನಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದೆ. ಸೂರಂಬೈಲು ನಿವಾಸಿ ಸಂದೀಪ್ (೨೨) ತಂಡದ ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ದ್ದಾರೆ. ಇಂದು ಮುಂಜಾನೆ ೨.೩೦ರ ವೇಳೆ ಗಣೇಶೋತ್ಸವ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಸಂದೀಪ್ ಮುಜುಂಗಾವು ಕ್ಷೇತ್ರ ಸಮೀಪ ಆಹಾರ ಸೇವಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲ್ಲಿಗೆ ತಲುಪಿದ ಪೆರ್ಣೆಯ ನಿತಿನ್ ಹಾಗೂ ಸೀತಾಂಗೋಳಿಯ ದೀಕ್ಷಿತ್ ಎಂಬಿವರು ಹಲ್ಲೆಗೈದುದಾಗಿ ದೂರಲಾಗಿದೆ. ಪೂರ್ವದ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ.