ಯುವಕನಿಗೆ ಹಲ್ಲೆ ಇಬ್ಬರ ವಿರುದ್ಧ ಕೇಸು
ಬದಿಯಡ್ಕ: ಯುವಕನಿಗೆ ಹಲ್ಲೆ ನಡೆಸಿದ ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನೀರ್ಚಾಲು ಗೋಳಿಯಡ್ಕದ ಮೊಹಮ್ಮದ್ ರಫೀಕ್.ಬಿ (40) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅಲ್ತಾಫ್ ಮತ್ತು ಖಲೀಲ್ ಎಂಬಿಬ್ಬರ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾರ್ಚ್ ೧ರಂದು ಸಂಜೆ ನೀರ್ಚಾಲು ಗೋಳಿಯಡ್ಕದಲ್ಲಿ ಅಂಗಡಿಯೊಂದರ ಮುಂದೆ ಓರ್ವ ಆರೋಪಿ ನನ್ನನ್ನು ತಡೆದು ನಿಲ್ಲಿಸಿ ಚಾಕು ಬೀಸಿ ಗಾಯಗೊಳಿಸಿದ ನೆಂದೂ, ಇನ್ನೋರ್ವ ಆರೋಪಿ ತನಗೆ ಹೀನಾಯವಾಗಿ ಬೈದು ಬೆದರಿಕೆಯೊಡ್ಡಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ರಫೀಕ್ ಆರೋಪಿಸಿದ್ದಾರೆ.