ಯುವಕನಿಗೆ ಹಲ್ಲೆ: ನರಹತ್ಯಾ ಯತ್ನ ಕೇಸು ದಾಖಲು
ಉಪ್ಪಳ: ಯುವಕನನ್ನು ತಡೆದು ನಿಲ್ಲಿಸಿ ದೊಣ್ಣೆಯಿಂದ ಹೊಡೆದು ಗಾಯ ಗೊಳಿಸಿದ ಸಂಬಂಧ ಪೊಲೀಸರು ನರ ಹತ್ಯಾಯತ್ನ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕುರುಡಪದವು ಕುರಿಯ ನಿವಾಸಿ ಯತೀಶ್ ಕೆ. (41) ಅವರಿಗೆ ಈ ತಿಂಗಳ ೧೩ರಂದು ಬೆಳಿಗ್ಗೆ ಕೊಮ್ಮಂಗಳದಲ್ಲಿ ಆರೋಪಿ ಬಾಲಕೃಷ್ಣ ಶೆಟ್ಟಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಬಾಲಕೃಷ್ಣ ಶೆಟ್ಟಿ ವಿರುದ್ಧ ಕರ್ನಾಟಕದ ಪೊಲೀಸರಿಗೆ ಮಾಹಿತಿ ನೀಡಿದ ದ್ವೇಷದಿಂದ ಹಲ್ಲೆಗೈದಿರುವುದಾಗಿ ದೂರಲಾಗಿದೆ.