ಅಪಘಾತಕ್ಕೀಡಾದ ಆಟೋದಲ್ಲಿ ತಂಬಾಕು ಉತ್ಪನ್ನಗಳು ಪತ್ತೆ : ಕಾಸರಗೋಡು ನಿವಾಸಿ ಕಸ್ಟಡಿಗೆ

ಕಾಸರಗೋಡು: ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಆಟೋ ರಿಕ್ಷಾದಲ್ಲಿ ೧೬ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಈ ಸಂಬಂಧ ಚಾಲಕ  ಕಾಸರಗೋ ಡು ನೆಲ್ಲಿಕುಂಜೆ ನಿವಾಸಿ ಪಾದೂರು ಹೌಸ್‌ನ ಉಮ್ಮರ್ ಫಾರೂಕ್ (೪೨) ಎಂಬಾತನನ್ನು ಚಂದೇರ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಇಂದು ಮುಂಜಾನೆ ಚೆರ್ವ ತ್ತೂರು ಕೊವ್ವಲ್ ಐಸ್ ಪ್ಲಾಂಟ್ ಸಮೀಪ ಆಟೋ ರಿಕ್ಷಾ ಅಪಘಾತಕ್ಕೀ ಡಾಗಿದೆ. ವಿಷಯ ತಿಳಿದು ತಲುಪಿದ ಚಂದೇರ ಪೊಲೀಸರು ನಡೆಸಿದ ತಪಾಸಣೆ ವೇಳೆ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚ ಲಾಗಿದೆ. ಮಂಗಳೂರಿನಿಂದ ಲಾರಿಯಲ್ಲಿ ಸಾಗಿಸಿದ  ತಂಬಾಕು ಉತ್ಪನ್ನಗಳನ್ನು ಕಾಸರಗೋಡಿನಲ್ಲಿ ಆಟೋ ರಿಕ್ಷಾಕ್ಕೆ ತುಂಬಿಸಲಾಗಿದೆ. ಕಣ್ಣೂರಿನ ಏಜೆಂಟ್‌ಗೆ ತಲುಪಿಸಲು  ಇದನ್ನು ಕೊಂಡೊಯ್ಯ ಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page