ಯುವಕನೋರ್ವ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಯುವಕನೋರ್ವ ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕಾಸರಗೋಡು ಕಸಬಾ ಹಾರ್ಬರ್ ರಸ್ತೆ ಬಳಿಯ ಮೀನು ಕಾರ್ಮಿಕ ಸುರೇಂದ್ರನ್ ಎಂಬವರ ಪುತ್ರ ಧನ್‌ಶ್ಯಾಂ (25) ಸಾವನ್ನಪ್ಪಿದ ಯುವಕ. ಈ ಹಿಂದೆ ದುಬಾಯಿಯಲ್ಲಿ ಉದ್ಯೋಗದಲ್ಲಿದ್ದ ಈತ ಈಗಷ್ಟೇ ಊರಿಗೆ ಹಿಂತಿರುಗಿದ್ದನು. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. 

ಮೃತರು ತಂದೆಯ ಹೊರತಾಗಿ ತಾಯಿ ಬಿಂದು, ಸಹೋದರ ಶಿವನ್, ಸಹೋದರಿ ಶ್ಯಾಮಿಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page