ಯುವಕನ ಮೇಲೆ ಹಲ್ಲೆ ನಡೆಸಿ ಸ್ಕೂಟರ್  ಹಿಡಿದೆಳೆದು ಸಾಗಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ಕಳೆದ ನವಂಬರ್ ೧೬ರಂದು ರಾತ್ರಿ ತಳಂಗರೆಯ ಹೋಟೆಲೊಂದಕ್ಕೆ ಆಹಾರ ಸೇವಿಸಲು ಹೋಗಿದ್ದ ಅಡ್ಕತ್ತಬೈಲು ನಿವಾಸಿ ರಾಜೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಹಿಡಿದೆಲೆದು ಎಸೆದ ಬಳಿಕ ಅವರ ಕೈಯಲ್ಲಿದ್ದ ಸ್ಕೂಟರ್‌ನ ಕೀಲಿಯನ್ನು ಹಿಡಿದೆಳೆದು  ಆ ಸ್ಕೂಟರ್‌ನೊಂದಿಗೆ ಸಾಗಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ವಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈ ಹಿಂದೆ ತೆರುವತ್ ಸಿರಾಮಿಕ್ಸ್ ರೋಡ್ ಕ್ವಾರ್ಟರ್ಸ್ ಒಂದರಲ್ಲಿ  ವಾಸಿಸುತ್ತಿದ್ದು ಈಗ ಉಳಿಯತ್ತಡ್ಕದಲ್ಲಿ ನೆಲೆಸಿರುವ ಜಾವೀದ್ ಎಚ್.ಎಂ (೨೩) ಬಂಧಿತ ಆರೋಪಿ. ಈತ ಕಸಿದೊಯ್ದ ಸ್ಕೂಟರನ್ನು ಬಳಿಕ ತಳಂಗರೆ ಕಡವತ್ತ್‌ನಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ.

Leave a Reply

Your email address will not be published. Required fields are marked *

You cannot copy content of this page