ಯುವಕ ನೇಣು ಬಿಗಿದು ಮೃತ್ಯು

ಹೊಸದುರ್ಗ: ಯುವಕ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮಡಿಯನ್ ಕುಲೋಂ ಕ್ಷೇತ್ರ ಸಮೀಪ ನಿವಾಸಿ ಬಾಬು- ಪ್ರೇಮ ದಂಪತಿ ಪುತ್ರ ಪ್ರಣವ್ (23) ಮೃತಪಟ್ಟವರು. ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಕಾರ್ಮಿಕನಾಗಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಘಟನೆ ನಡೆದಿದೆ. ತಾಯಿ ಕೆಲಸ ಮುಗಿಸಿ ಮನೆಗೆ ಬರುವಾಗ ಪುತ್ರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಸಹೋದರ ಪ್ರವೀಣ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page