ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಟ್ಟಡ ನಿರ್ಮಾಣ ಕಾರ್ಮಿಕನಾದ ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಳ್ಳಿಕೆರೆ ಚೇಟುಕುಂಡಿನ ಅಂಬಾಡಿ- ಮಾಧವಿ ದಂಪತಿಯ ಪುತ್ರ ಮಣಿಕಂಠನ್ (೩೫) ಸಾವನ್ನಪ್ಪಿದ ಯುವಕ. ಚೇಟುಕುಂಡು ತೆಕ್ಕುಪುರಂ ರೈಲ್ವೇ ಹಳಿ ಬಳಿಯ ಶೆಡ್‌ವೊಂದರೊಳಗೆ ಮಣಿಕಂಠನ್ ನಿನ್ನೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತರು ಸಹೋದರ ಮಹೇಶ್, ಸಹೋದರಿ ಮಾಲಿನಿ ಎಂಬಿವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page