ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಮುಳ್ಳೇರಿಯ: ಯುವಕನೋರ್ವ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಳ್ಳೇರಿಯ ಸಮೀಪ ಕಾರ್ಲೆ ನಿವಾಸಿ ಜಯರಾಮ ಶೆಟ್ಟಿ ಎಂಬವರ ಪುತ್ರ ಗಾರೆ ಕಾರ್ಮಿಕ ಮನೋಜ್ ಕೆ (31) ಸಾವನ್ನಪ್ಪಿದ ಯುವಕ. ಇವರು ನಿನ್ನೆ ಬೆಳಿಗ್ಗೆ ದೇಲಂಪಾಡಿ ಬಸ್ ಪ್ರಯಾ ಣಿಕರ ತಂಗುದಾಣ ಸಮೀಪದ ಹಳೆಯ ಕಟ್ಟಡದಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಪೊಲೀಸರು ತಲುಪಿ ಮೃತದೇಹದ ಪಂಚನಾಮೆ ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರು ತಂದೆ, ತಾಯಿ ಇಂದಿರಾ, ಸಹೋದರಿಯರಾದ ಹರ್ಷಿತಾ, ಅರ್ಪಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.