ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಬಂದಡ್ಕ ಮಾರಿಪಡ್ಪು ಕನಿಯಾಪರಂಬಿಲ್ ಹೌಸ್‌ನ ಜನಾರ್ದನನ್-ದೀಪಾ ದಂಪತಿ ಪುತ್ರ ಅದ್ವೈತ್ (೨೧) ನಿನ್ನೆ ಮನೆ ಪಕ್ಕದ ಮರಕ್ಕೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನು ಮಾನಸಿಕ ರೋಗಿಯೆಂದು ಪೊಲೀಸರು ತಿಳಿಸಿದ್ದಾರೆ.

ಮೃತನು ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಅರ್ಜುನ್, ಆದಿತ್ಯ, ದೀಪೇಶ್, ದಿವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.  ಬೇಡಗಂ ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page