ಯುವತಿಯನ್ನು ಕಿಚ್ಚಿರಿಸಿ ಕೊಲೆಗೈಯಲು ವಿವಾಹದಿಂದ ಹಿಂಜರಿದ ಘಟನೆ ಕಾರಣ
ಪಾಲಕ್ಕಾಡ್: ಕೋಟಮುಂ ಡದಲ್ಲಿ ಯುವತಿಯನ್ನು ಕಿಚ್ಚಿರಿಸಿದ ಕೊಲೆಗೈದ ಆರೋಪಿ ಸಂತೋಷ್ ಆಕೆಯನ್ನು ಈ ಮೊದಲು ಬೆದರಿಸಿರು ವುದಾಗಿ ಸೂಚನೆ ಲಭಿಸಿದೆ. ಕೊಲೆಗೀ ಡಾದ ಪ್ರಿವಿಯ ವಿವಾಹ ನಿಶ್ಚಯಿಸಿರು ವುದರೊಂದಿಗೆ ಈ ವಿವಾಹದಿಂದ ಹಿಂಜರಿಯಬೇಕೆಂದು ಸಂತೋಷ್ ತಿಂಗಳುಗಳ ಹಿಂದೆ ಬೆದರಿಕೆಯೊಡ್ಡಿ ರುವುದಾಗಿ ಪ್ರಿವಿಯ ಹೆತ್ತವರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ. ವಿಷು ದಿನದಂದು ಭಾವೀ ವರನನ್ನು ಕಾಣಲೆಂದು ತೆರಳುತ್ತಿದ್ದಾಗ ತೃತ್ತಾಲ ಪಟ್ಟಿತ್ತರ ಕಂಗಣ ಎಂಬಲ್ಲಿ ಪ್ರಿವಿ (೩೦)ನನ್ನು ಕೊಲೆಗೈಯ್ಯಲಾಗಿತ್ತು. ಯುವತಿ ತುಂಬಾ ಹೊತ್ತು ನಾಪತ್ತೆಯಾದ ಹಿನ್ನೆಲೆಯಲ್ಲಿ ಭಾವೀ ವರ ಈಕೆಯನ್ನು ಹುಡುಕಾಡಲು ಆರಂಭಿಸಿದ್ದರು. ಈ ಸಮಯದಲ್ಲಿ ಸಂತೋಷ್ ಅವಸರದಿಂದ ವಾಹನ ವನ್ನು ಚಲಾಯಿಸಿ ತೆರಳುತ್ತಿರುವುದು ನೋಡಿದ್ದರು. ಈ ಮಾಹಿತಿಯನ್ನು ಇವರು ಪೊಲೀಸರಲ್ಲಿ ತಿಳಿಸಿದ್ದಾರೆ. ಕೊಲೆ ನಡೆಸಿದ ಬಳಿಕ ಸಂತೋಷ್ ಕೂಡಾ ಆತ್ಮಹತ್ಯೆಗೈದಿದ್ದಾನೆ. ವಿವಾಹವಾ ಗಬೇಕೆಂದು ಸಂತೋಷ್ ಪ್ರಿವಿಯಲ್ಲಿ ಆಗ್ರಹಿಸಿರುವುದಾಗಿ ಯೂ, ಆದರೆ ಆಕೆ ಅದರಿಂದ ಹಿಂಜರಿದಿರುವುದೇ ಕೊಲೆಗೆ ಕಾರಣವೆನ್ನಲಾಗಿದೆ. ಈ ತಿಂಗಳ ೨೯ರಂದು ನಿಶ್ಚಯಿಸಿದಂತೆ ಈಕೆಯ ವಿವಾಹ ನಡೆಯಬೇಕಾಗಿತ್ತು.