ಯುವತಿಯ ಕೈಹಿಡಿದು ಮಾನಹಾನಿಗೆ ಯತ್ನ : ಮೀನು ಮಾರಾಟಗಾರನ ವಿರುದ್ಧ ಕೇಸು

ಮುಳ್ಳೇರಿಯ: ವಾಹನದಲ್ಲಿ ಮೀನು ಮಾರಾಟಕ್ಕಾಗಿ ತಲುಪಿದ ಯುವಕ ಯುವತಿಯ ಕೈ ಹಿಡಿದೆಳೆದು ಮಾನ ಹಾನಿಗೆ ಯತ್ನಿಸಿದ ಬಗ್ಗೆ ದೂರಲಾ ಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಕರ್ನಾಟಕ ನಿವಾಸಿಯಾ ದ ಆಫಿಸ್ (35) ಎಂಬಾತನ ವಿರುದ್ಧ ಆದೂರು ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎಪ್ರಿಲ್ 29ರಂದು ನಡೆದ ಘಟನೆ ಬಗ್ಗೆ ಯುವತಿ ನಿನ್ನೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಫಿಸ್ ದೇಲಂಪಾಡಿ ಪಂಚಾಯತ್ ನ ವಿವಿಧ ಭಾಗಗಳಿಗೆ ವಾಹನದಲ್ಲಿ ಮೀನು ಸಾಗಾಟ ನಡೆಸಿ ಮಾರಾಟ ನಡೆಸುತ್ತಿದ್ದಾನೆನ್ನಲಾಗಿದೆ. ಎಪ್ರಿಲ್ 29ರಂದು ಮೀನು ಸಹಿತ ತಲುಪಿದ ಈತ ಯುವತಿಯ ಕೈಹಿಡಿದೆಳೆದಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page