ಯುವತಿ ನಾಪತ್ತೆ

ಕುಂಬಳೆ: ಕೆಲಸಕ್ಕೆಂದು ತಿಳಿಸಿ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬಂದ್ಯೋಡು ಬಳಿಯ ಮಳ್ಳಂಗೈಯ ಜಯಕರ ಶೆಟ್ಟಿ ಎಂಬವರ ಪುತ್ರಿ ಶ್ರೇಯ (೨೩) ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ರೇಯ ಉಪ್ಪಳದ ಅಂಗಡಿಯೊಂ ದರಲ್ಲಿ ನೌಕರೆಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಹೋದಾಕೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page