ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆ

ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ನಗರದ ಕೋಟೆಕಣಿ ನಿವಾಸಿ ದಿ| ರಘುವೀರ ಶೆಟ್ಟಿ-ದಿ| ಯಮುನಾ ದಂಪತಿಯ ಪುತ್ರಿ ರಶ್ಮಿ ಆರ್. ಶೆಟ್ಟಿ (೩೫) ಸಾವಿಗೀಡಾದ ಯುವತಿ. ಈಕೆ ನಿನ್ನೆ  ಮನೆ ಯೊಳಗೆ ಒಬ್ಬರೇ ಇದ್ದರೆನ್ನಲಾಗಿದೆ. ಅಪರಾಹ್ನ ೩ ಗಂಟೆ ವೇಳೆ ಸಹೋದರ ಕಾರ್ತಿಕ್ ಮನೆಗೆ  ತಲುಪಿದಾಗ ಕೊಠಡಿಯ ಬಾಗಿಲು ಮುಚ್ಚಿಕೊಂಡಿತ್ತು. ರಶ್ಮಿಯನ್ನು  ಕರೆದರೂ ಯಾವುದೇ ಪ್ರತಿಕ್ರಿಯೆ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ  ಬಾಗಿಲು ತೆರೆದು ನೋಡಿದಾಗ ರಶ್ಮಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಬಳಿಕ ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ್ದು, ನಂತರ ಜನರಲ್ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.

ಮೃತರು ಓರ್ವ ಸಹೋದರ  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page