ಯೂತ್ ಲೀಗ್ ನೇತಾರ, ಕುಟುಂಬ ಸಂಚರಿಸಿದ ಕಾರನ್ನು ತಡೆದು ನಿಲ್ಲಿಸಿ ಹಲ್ಲೆ
ಕಾಸರಗೋಡು: ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಕಾರ್ಯ ದರ್ಶಿ ಹಾಗೂ ಕುಟುಂಬ ಸಂಚರಿ ಸುತ್ತಿದ್ದ ಕಾರನ್ನು ತಂಡವೊಂದು ತಡೆದು ನಿಲ್ಲಿಸಿ ಅವರ ಮೇಲೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಸಂಬಂಧ ನವಾಸ್ ಎಂಬಾತನ ಸಹಿತ 4 ಮಂದಿ ವಿರುದ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಮಧ್ಯಾಹ್ನ ಚೆಂಗಳ ಬಂಬ್ರಾಣಿನಗರದಲ್ಲಿ ಘಟನೆ ನಡೆದಿದೆ. ಯೂತ್ ಲೀಗ್ ಜಿಲ್ಲಾ ಕಾರ್ಯದರ್ಶಿ ಹಾಶಿಂ ಬಂಬ್ರಾಣಿ ಹಾಗೂ ಅವರ ಪತ್ನಿ, ಮಕ್ಕಳು ಸಂಚರಿಸುತ್ತಿದ್ದ ಕಾರನ್ನು ನಿನ್ನೆ ಮಧ್ಯಾಹ್ನ ಬಂಬ್ರಾಣಿನಗರದಲ್ಲಿ ತಂಡವೊಂದು ತಡೆದು ನಿಲ್ಲಿಸಿದೆ. ಅದನ್ನು ಪ್ರಶ್ನಿಸಿದ ಹಾಶಿಂ ಬಂಬ್ರಾಣರ ಮುಖಕ್ಕೆ ಕಬ್ಬಿಣದ ಸರಳಿನಿಂದ ತಂಡ ಇರಿಯಲು ಯತ್ನಿಸಿದೆ. ಅಲ್ಲದೆ ಹಾಶಿಂರ ಪತ್ನಿ ಹಾಗೂ ಮಕ್ಕಳ ಮೇಲೂ ತಂಡ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.