ರಜಾವಧಿ ಮುಗಿದ ಬಳಿಕ ರಾಜ್ಯದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಹೆಚ್ಚಳ ಸಾಧ್ಯತೆ: ಜಾಗ್ರತಾ ನಿರ್ದೇಶ

ಕೊಚ್ಚಿ: ಕ್ರಿಸ್ಮಸ್ ರಜಾವಧಿಯ ಬಳಿಕ ರಾಜ್ಯದಲ್ಲಿ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಹೆಚ್ಚಳವುಂಟಾಗುವ ಸಾಧ್ಯತೆ ಇದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ರೂಪಾಂತರಿ ಬಗ್ಗೆ ಆತಂಕ ಅಗತ್ಯವಿಲ್ಲ. ಆದರೆ ಹೆಚ್ಚು ವಯಸ್ಸಾದವರು ಹಾಗೂ ಇತರ ರೋಗ ಬಾಧಿತರು ಜಾಗ್ರತೆ ಪಾಲಿಸಬೇಕೆಂದು ತಿಳಿಸಲಾಗಿದೆ. ಪ್ರತಿರೋಧ ಶಕ್ತಿ ಕಡಿಮೆಯಿರುವವರು ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆಯಬೇಕೇ  ಎಂಬ ಕುರಿತಾಗಿ ಇನ್ನಷ್ಟೇ ಚರ್ಚೆ ನಡೆಸಿ ತೀರ್ಮಾನಿಸಬೇಕಾಗಿದೆ. ರಾಜ್ಯದಲ್ಲೂ, ದೇಶದಲ್ಲೂ, ಜಗತ್ತಿನಲ್ಲೂ ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿದೆ. ತಪಾಸಣೆಯ ಸಂಖ್ಯೆ ಹೆಚ್ಚಿದಂತೆ ಹೆಚ್ಚೆಚ್ಚು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಿದೆ. ಆದ್ದರಿಂದ ಹೆಚ್ಚು ಜನರು ಭಾಗವಹಿಸುವ ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಜಾಗ್ರತೆ ಅನಿವಾರ್ಯವಾಗಿದೆಯೆಂದೂ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

ಜನರು ಗುಂಪು ಸೇರಿರುವಲ್ಲಿಗೆ ತೆರಳುವಾಗ ಮಾಸ್ಕ್ ಧರಿಸಬೇಕು,  ಜ್ವರ ಲಕ್ಷಣವುಳ್ಳವರು ರೋಗ ಪ್ರತಿರೋಧ ಶಕ್ತಿ ಕಡಿಮೆಯಿರುವವರಿಂದ ಅಂತರ ಪಾಲಿಸಬೇಕೆಂದೂ ತಿಳಿಸಿದ್ದಾರೆ.

ಕೋವಿಡ್‌ನ ಹೊಸ ರೂಪಾಂತರಿ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವುದಿಲ್ಲವೆಂ ಬುದು ನೆಮ್ಮದಿಯ ಸಂಗತಿಯಾಗಿದೆ. ಆದರೆ ಪ್ರತಿರೋಧ ಶಕ್ತಿ ಕಡಿಮೆಯಾ ದವರಿಗೆ ವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡಬೇಕೇ ಎಂಬ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಾಗಿದೆ. ಪ್ರಸ್ತುತ ಕೋಟ್ಟಯಂ, ಎರ್ನಾಕುಳಂ, ತಿರುವನಂತಪುರ ಜಿಲ್ಲೆಗಳಲ್ಲಿ ರೋಗ  ಹರಡುವಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಅದರಿಂದ ಈ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದೂ ಆರೋಗ್ಯ ಇಲಾಖೆ ತಜ್ಞರು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page