ರಬ್ಬರ್ ಶೀಟ್ ಸೇರಿದಂತೆ ೨.೩೦ ಲಕ್ಷ ರೂ. ಮೌಲ್ಯದ ಸಾಮಗ್ರಿ ಕಳವು: ಓರ್ವ ಸೆರೆ
ಮುಳ್ಳೇರಿಯ: ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರುನಲ್ಲಿರುವ ದಾಸ್ತಾನು ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ೧೫ ಕ್ವಿಂಟಾಲ್ ರಬ್ಬರ್ ಶೀಟ್ ಮತ್ತು ಮೂರು ಕ್ವಿಂಟಾಲ್ ಒಟ್ಟುಪಾಲಂ ಕಳವುಗೈದ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.
ಕರ್ನಾಟಕ ಕೊಡಗು ಮೆದಿ ನಾಡು ದೇವರ್ಕೊಲ್ಲ ವಡಕ್ಕೇಡತ್ತ್ ಹೌಸಿನ ಕುಂಞಿಮೋನ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ, ಈ ಸಂಬಂಧ ಅಲ್ಲಿನ ಟ್ಯಾಪಿಂಗ್ ಕಾರ್ಮಿಕ ನೆಟ್ಟಣಿಗೆಯ ಜನಾರ್ದನ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ದೂರುಗಾರನ ಮಗನ ಹೆಸರಲ್ಲಿರುವ ಕಟ್ಟಡದಲ್ಲಿ ಈ ಮಾಲುಗಳನ್ನು ದಾಸ್ತಾನು ಇರಿಸಲಾಗಿತ್ತು. ೨೦೨೨ ಎಪ್ರಿಲ್ನಿಂದ ೨೦೨೩ ಆಗಸ್ಟ್ ೩೦ರ ಅವದಿಯೊಳಗಾಗಿ ರಬ್ಬರ್ ಶೀಟ್ ಇತ್ಯಾದಿ ಸೇರಿದಂತೆ ಒಟ್ಟು ೨,೩೦,೦೦೦ ಮೌಲ್ಯದ ಸಾಮಗ್ರಿಗಳನ್ನು ಕಳವುಗೈಯ್ಯಲಾಗಿದೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.