ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದು ಸಂಘರ್ಷಕ್ಕೆತ್ನ: ಮೂವರ ಬಂಧನ

ಕಾಸರಗೋಡು: ರಸ್ತೆಯಲ್ಲಿ ಬಿಯರ್ ಬಾಟಲಿ ಒಡೆದು ಸಂಘರ್ಷಕ್ಕೆ ಯತ್ನಿಸಲಾಯಿತೆಂಬ ದೂರಿನಂತೆ ಮೂವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾರೆಕಟ್ಟೆಯ ಅಭಿಲಾಷ್, ಕೇಳುಗುಡ್ಡೆಯ ಮನೀಶ್ ಕುಮಾರ್, ಆರ್.ಡಿ.ನಗರದ ಅವಿನೇಶ್ ಎಂಬಿವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಗೆ ನ್ಯಾಯಾಲಯ ರಿಮಾಂ ಡ್ ವಿಧಿಸಿದೆ. ಮೊನ್ನೆ  ರಾತ್ರಿ 12.30 ರ ವೇಳೆ ಚೂರಿ ಎಂಬಲ್ಲಿ ಘಟನೆ ನಡೆದಿತ್ತು.  ಬೈಕ್‌ನಲ್ಲಿ ಪ್ರಯಾಣಿಸು ತ್ತಿದ್ದ ಯುವಕರು ಹಾಗೂ ಸ್ಥಳದಲ್ಲಿದ್ದ ಕೆಲವು ಯುವಕರ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದೆ. ಬಳಿಕ ಸ್ಥಳದಿಂದ ಹೋದ ತಂಡ ಮರಳಿ ಬಂದು ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದು ಸಂಘರ್ಷಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. 

Leave a Reply

Your email address will not be published. Required fields are marked *

You cannot copy content of this page