ರಸ್ತೆ ನಿರ್ಮಾಣ ಉಪಕರಣಗಳ ಕಳವು: ಮೂವರ ಸೆರೆ
ಬದಿಯಡ್ಕ: ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಾಪಾಲಿಪೊನದ ನಿಸಾದ್ (೪೮), ಮೇಲ್ಪರಂಬ ಕಳನಾಡಿನ ಇರ್ಫಾನ್ (೩೬), ಚೆರ್ಕಳ ಕೆಕೆ ಪುರದ ಸುಂದರ (೪೮) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಮಾರಾಟ ನಡೆಸಿದ ಕಳವು ಸೊತ್ತುಗಳನ್ನು ಕಾಸರಗೋಡಿನಿಂದ ಪತ್ತೆಹಚ್ಚಲಾಗಿದೆ. ಕಂದಲ್-ಮುಂಡಿತ್ತಡ್ಕ ರಸ್ತೆ ನಿರ್ಮಾಣಕ್ಕೆ ಅಗತ್ಯಕ್ಕಾಗಿ ತಂದಿರಿಸಿದ್ದ ಉಪಕರಣ ಹಾಗೂ ಸಾಮಗ್ರಿಗಳನ್ನು ಇತ್ತೀಚೆಗೆ ಕಳವುನಡೆಸಲಾಗಿದೆ. ಜನವಾಸವಿಲ್ಲದ ಸ್ಥಳದಲ್ಲಿ ಇವುಗಳನ್ನು ಇರಿಸಲಾಗಿತ್ತು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಕೂಡ್ಲು ಆರ್ಡಿ ನಗರದ ಅಬ್ದುಲ್ ರಮೀಸ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.