ರಸ್ತೆ ಬದಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ: ಕೊಲೆ ಎಂದು ಶಂಕೆ

ಕೊಚ್ಚಿ: ನವಜಾತ ಶಿಶುವಿನ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಹಚ್ಚಲಾಗಿದೆ. ಕೊಚ್ಚಿ ವಿದ್ಯಾನಗರದ ಅಪಾರ್ಟ್‌ಮೆಂಟ್ ಒಂದರ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ. ನವಜಾತ ಶಿಶುವನ್ನು ಅಪಾರ್ಟ್ ಮೆಂಟ್‌ನಿಂದ ಕೆಳಗೆ ಎಸೆದು ಕೊಂದಿರಬೇಕೆಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ ೮ ಗಂಟೆ ವೇಳೆ ಘಟನೆ ನಡೆದಿದೆ. ಕೆಲಸಕ್ಕೆ ತಲುಪಿದ ಶುಚೀಕರಣ ಕಾರ್ಮಿಕರು ರಸ್ತೆ ಬದಿಯಲ್ಲಿ ಕಂಡುಬಂದ ಕಟ್ಟವನ್ನು ಪ್ರಥಮವಾಗಿ ಕಂಡಿದ್ದರು. ಬಳಿಕ ನಡೆಸಿದ ತಪಾಸಣೆಯಲ್ಲಿ ಇದು ನವಜಾತ ಶಿಶುವಿನ ಮೃತದೇಹವೆಂದು ಪತ್ತೆಹಚ್ಚಲಾಗಿದೆ. ಸಿಸಿ ಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ. ಪೊಲೀಸರು ಸ್ಥಳಕ್ಕೆ ತಲುಪಿ ತಪಾಸಣೆ ಆರಂಭಿಸಿದ್ದಾರೆ. ಮಗುವನ್ನು ಜೀವಂತ ಕೆಳಕ್ಕೆ ಎಸೆದು ಕೊಂದಿರುವುದೋ ಅಥವಾ ಕೊಲೆಗೈದ ಬಳಿಕ ಹೊರಗೆಸೆಯಲಾಗಿದೆಯೋ ಎಂಬ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ. ಫ್ಲಾಟ್‌ನಲ್ಲಿ ಗರ್ಭಿಣಿಯರು ಇರಲಿಲ್ಲವೆಂದು ಹೇಳಲಾಗುತ್ತಿದೆ.ಇಲ್ಲಿ ಕೆಲಸ ಮಾಡುವ ಮಹಿಳೆಯರಲ್ಲೂ ಗರ್ಭಿಣಿಯರಿಲ್ಲವೆಂದು ಮಾಹಿತಿ ಲಭಿಸಿದೆ. ೨೧ ಕುಟುಂಬಗಳು ಈ ಫ್ಲಾಟ್‌ನಲ್ಲಿ ವಾಸವಾಗಿದ್ದು, ಇದರಲ್ಲಿ ಮೂರು ಫ್ಲಾಟ್ ಖಾಲಿಯಾಗಿವೆ. ಇಲ್ಲಿಗೆ ಇತ್ತೀಚಿನ  ದಿನಗಳಲ್ಲಿ ಯಾರಾದರೂ ಬಂದಿದ್ದಾರೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page