ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬ ತೆರವಿಗೆ ಬಿಎಂಎಸ್ ಆಗ್ರಹ

ಕಾಸರಗೋಡು: ರಸ್ತೆ ಬದಿಯಲ್ಲಿ ಅಪಾಯಕರವಾದ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸ ಬೇಕೆಂದು ಬಿ.ಎಂ.ಎಸ್ ಆಗ್ರಹಿಸಿದೆ.

ಇದೇ ಬೇಡಿಕೆ ಮುಂದಿಟ್ಟು ಕರಂದಕ್ಕಡ್- ಮಧೂರು ರಸ್ತೆಯಲ್ಲಿ  ಬಿಎಂಎಸ್ ಬೋರ್ಡ್ ಸ್ಥಾಪಿಸಿದೆ. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇತ್ತೀಚೆಗೆ ಬಸ್ ಪ್ರಯಾಣಿಕನಾಗಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದನು. ಇದಲ್ಲದೆ ಇದಕ್ಕೆ ಮುಂಚಿತವೂ ಈ ರಸ್ತೆಯಲ್ಲಿ ಈ ರೀತಿಯ ಅಪಘಾತ ಉಂಟಾಗಿದೆ ಎಂದು ಬಿ.ಎಂ.ಎಸ್. ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page