ರಸ್ತೆ ಬದಿ ಅನಧಿಕೃತವಾಗಿ ಬೋರ್ಡ್, ಬ್ಯಾನರ್ ಸ್ಥಾಪಿಸಿದಲ್ಲಿ ೫೦೦೦ ರೂ. ಜುಲ್ಮಾನೆ, ಕಾನೂನುಕ್ರಮ

ಕಾಸರಗೋಡು: ರಾಜ್ಯದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಬೋರ್ಡ್‌ಗಳು, ಬ್ಯಾನರ್‌ಗಳು, ಧ್ವಜ ಇತ್ಯಾದಿಗಳನ್ನು ಸ್ಥಾಪಿಸಿದಲ್ಲಿ ಅದಕ್ಕೆ ಪ್ರತಿಯೊಂದಕ್ಕೂ ತಲಾ ೫೦೦೦ ರೂ.ನಂತೆ ಜುಲ್ಮಾನೆ ವಿಧಿಸಲು ಹಾಗೂ ಅದನ್ನು ಸ್ಥಾಪಿಸಿದವರ ವಿರುದ್ದ ಕಾನೂನುಕ್ರಮ (ಪ್ರೋಸಿಕ್ಯೂ  ಷನ್)ಕೈಗೊಳ್ಳುವಂತೆ ರಾಜ್ಯ ಸರಕಾರ ಹೊಸ ನಿರ್ದೇಶ ನೀಡಿದೆ.

ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಬ್ಯಾನರ್, ಬೋರ್ಡ್, ಪತಾಕೆ ಗಳನ್ನು  ಸ್ಥಾಪಿಸುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ರಾಜ್ಯ ಹೈಕೋರ್ಟ್ ಈ ಹಿಂದೆಯೇ  ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಜ್ಯಾರಿಗೊ ಳಿಸಲು  ಮುಂದಾಗದ ಸ್ಥಳೀಯಾ ಡಳಿತ ಸಂಸ್ಥೆಗಳು ಮತ್ತು ಸರಕಾರದ ನಿಲುವನ್ನು ಹೈಕೋರ್ಟ್ ಬಳಿಕ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಆದ್ದರಿಂದ ಅದನ್ನು  ಜ್ಯಾರಿಗೊಳಿಸುವ ಸಲುವಾಗಿ ಸರಕಾರ ಕೊನೆಗೆ ಈ ನಿರ್ದೇಶ ಜ್ಯಾರಿಗೊಳಿಸಿದೆ.  ಸರಕಾರದ ಪರವಾಗಿ ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಈ ನಿರ್ದೇಶ ಜ್ಯಾರಿಗೊಳಿಸಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಜಾಹೀರಾತುಗಳನ್ನು  ಪ್ರದರ್ಶಿಸು ವುದಕ್ಕೆ ಸಂಬಂಧಿಸಿ ಮುನಿಸಿಪಲ್ ಕಾನೂನು (೧೯೯೯) ಪ್ರಕಾರ ಇನ್ನು ಜುಲ್ಮಾನೆ ವಿಧಿಸಲಾಗುವುದಲ್ಲದೆ ಅದನ್ನು ಸ್ಥಾಪಿಸಿದವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು. ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸುವಿಕೆ, ಸಾರ್ವಜನಿಕ ಕಿರುಕುಳ, ಸಾರ್ವಜನಿಕ ಸ್ಥಳದಲ್ಲಿ ಅಪಘಾತಕ್ಕೆ ಕಾರಣವಾಗುವಿಕೆ ಇತ್ಯಾದಿ ಕಾನೂನು ಕ್ರಮಗಳ ಪ್ರಕಾರ ಇನ್ನು ಈ ಪ್ರಕರಣ ದಾಖಲಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page