ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಜೈಲಿನಿಂದ ಬಿಡುಗಡೆಗೊಂಡ ಶಾಂತಾನಂ ಸಾವು
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಗೊಳಗಾಗಿ ಬಳಿಕ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗ ಡೆಗೊಂಡಿದ್ದ ಎಂ.ಟಿ. ಶಾಂತಾನಂ (೫೫) ಸಾವನ್ನಪ್ಪಿದ್ದಾನೆ. ಈತ ಗಂಭೀರ ಕರುಳು ರೋಗಕ್ಕೊಳಗಾಗಿ ಚೈನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದನು.
ಶ್ರೀಲಂ ಕಾದಲ್ಲಿರುವ ತಾಯಿಯನ್ನು ಕಾಣಲು ಅನುಮತಿ ನೀಡಬೇಕೆಂದು ಕೋರಿ ಆತ ಭಾರತ ಮತ್ತು ಶ್ರೀಲಂಕಾ ಸರಕಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಮನವಿ ಸಲ್ಲಿಸಿದ್ದನು. ಅದಕ್ಕೆ ಉಭಯ ಸರಕಾರಗಳು ಅನುಮತಿ ನೀಡಿತ್ತು. ಅದರಂತೆ ಆತ ಶ್ರೀಲಂಕಾಕ್ಕೆ ತೆರಳುವ ಸಿದ್ಧತೆಯಲ್ಲಿ ತೊಡಗಿರು ವೇಳೆಯಲ್ಲೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.