ರಾಜ್ಮೋಹನ್ ಉಣ್ಣಿತ್ತಾನ್ರಿಂದ ನಾಮಪತ್ರ ಸಲ್ಲಿಕೆ ಪಂಚಾಯತ್ ಮಟ್ಟದ ಪರ್ಯಟನೆ ಆರಂಭ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಯುಡಿಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಜಿಲ್ಲಾ ಪ್ರಧಾನ ಸಂಚಾಲಕ ಪಿ.ಕೆ. ಫೈಸಲ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್ ಮೊದಲಾದವರು ಭಾಗವಹಿಸಿದರು.
ರಾಜ್ಮೋಹನ್ ಉಣ್ಣಿತ್ತಾನ್ರ ಪಂಚಾಯತ್ ಮಟ್ಟದ ಪರ್ಯಟನೆಗೆ ಇಂದು ಚಾಲನೆ ನೀಡಲಾಗಿದೆ. ಪಯೆಯಂಙಾಡಿನಿಂದ ಬೆಳಿಗ್ಗೆ ಆರಂಭಗೊಂಡ ಪರ್ಯಟನೆಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಎಂ. ಸುಧೀರ್ ಉದ್ಘಾಟಿಸಿದರು. ಮಂಜೇಶ್ವರದಲ್ಲಿ ೧೬, ೨೦, ಕಾಸರಗೋಡಿನಲ್ಲಿ ೧೩, ೨೧ರಂದು ಪರ್ಯಟನೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇದೇ ವೇಳೆ ಇಂದು ಶಾಸಕ ಚಾಂಡಿ ಉಮ್ಮನ್ ಐಕ್ಯರಂಗದ ಅಭ್ಯರ್ಥಿಗಾಗಿ ಜಿಲ್ಲೆಯ ವಿವಿಧ ಕಡೆಗಳ ಕುಟುಂಬ ಸಭೆಗಳಲ್ಲಿ ಭಾಗವಹಿಸಿ ಮತ ಯಾಚಿಸುವರು.