ರಾಜ್ಯಕ್ಕೆ ಬರುವವರನ್ನು ಸ್ವಾಗತಿಸಲು ತಲಪ್ಪಾಡಿಯಲ್ಲಿ ಕಾದು ನಿಂತಿವೆ ತುಕ್ಕು ಹಿಡಿದಿರುವ ಲಾರಿಗಳು

ಮಂಜೇಶ್ವರ:  ರಾಜ್ಯದ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ತುಕ್ಕು ಹಿಡಿದು ನಾಶದಂಚಿನಲ್ಲಿರುವ ಲಾರಿಗಳನ್ನು ನಿಲ್ಲಿಸಿದ್ದು ಇದು ರಾಜ್ಯಕ್ಕೆ ಆಗಮಿಸುವವರಿಗೆ ಸ್ವಾಗತ ನೀಡಲಾಗಿ ದೆಯೇ ಎಂದು ಜನರು ಆಶ್ಚರ್ಯವ್ಯಕ್ತ ಪಡಿಸುತ್ತಿದ್ದಾರೆ. ತಲಪ್ಪಾಡಿಯಲ್ಲಿ  ಅರಣ್ಯ, ಆರ್‌ಟಿಒ ಕಚೇರಿಗಳ ಮಧ್ಯೆಗಿನ ಸರಕಾರಿ ಸ್ಥಳದಲ್ಲಿ ಲಾರಿಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿವೆ. ಎರಡು ಲಾರಿಗಳಲ್ಲೊಂದು ಪೂರ್ಣವಾಗಿ ತುಕ್ಕು ಹಿಡಿದಿದೆ. ಇನ್ನೊಂದು ತುಕ್ಕು ಆವರಿಸತೊಡಗಿದೆ. ಇದೇ ವೇಳೆ ಲಾರಿಗಳು ಹೊರಗೆ ಕಾಣಿಸದಂತೆ ಅದರ ಸುತ್ತಲೂ ಕಾಡು ಪೊದೆಗಳು ಬೆಳೆದು ನಿಂತಿದೆ.

ರಾಜ್ಯದಲ್ಲಿ  ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸಬೇಕಾಗಿ ಬರಲಿದೆ ಯೆಂಬ ಆತಂಕ ನೆಲೆಗೊಂಡಿರುವಾಗಲೇ ಲಕ್ಷಾಂತರ ರೂಪಾಯಿಯ ಮೌಲ್ಯದ ವಾಹನಗಳು ಯಾರಿಗೂ  ಪ್ರಯೋಜನ ಕಾರಿಯಾಗದೆ ತುಕ್ಕು ಹಿಡಿದು ನಾಶಗೊಳ್ಳುತ್ತಿವೆ.  ಕಾನೂನು ವಿರುದ್ಧವಾಗಿ ಸರಕು ಸಾಗಾಟ ನಡೆಸಿದ ವತಿಯಿಂದ ಈ ಲಾರಿಗಳನ್ನು ವಶಪಡಿಸಲಾಗಿದೆಯೆಂದು ಅಂದಾಜಿಸಲಾಗಿದೆ. ಬೇರೆ ಯಾವುದಾದರೂ ಕಾರಣವಾದಲ್ಲಿ ದಂಡ, ಡೆಪಾಸಿಟ್  ವಸೂಲಿ ಮಾಡಿದ ಬಳಿಕ ವಾಹನಗಳನ್ನು ಆರ್ ಸಿ ಮಾಲಕರಿಗೇ ಮರಳಿ ನೀಡುವುದೋ ಅಥವಾ ಹರಾಜು ನಡೆಸಿ ಮಾರಾಟಗೈದಿರುತ್ತಿದ್ದರೆ ಲಾರಿ ಗಳನ್ನು ಕಸ್ಟಡಿಗೆ ತೆಗೆದುಕೊಂಡವರಿಗೆ ವೇತನ ನೀಡಲು ಬೇಕಾದ ಮೊತ್ತ ಪತ್ತೆಹಚ್ಚಬಹು ದಾಗಿತ್ತು. ಲಾರಿಗಳನ್ನು ಹಿಡಿದವರಿಗೆ,  ಅವರ ಮೇಲಧಿಕಾರಿ ಗಳಿಗೆ, ಇಲಾಖೆ ಸಚಿವರಿಗೆ, ಸರಕಾರಕ್ಕೂ ಅದ್ಯಾವುದೂ ಸಮಸ್ಯೆಯೇ ಅಲ್ಲ. ಆದ್ದರಿಂದಲೇ ಈ ರೀತಿಯಲ್ಲಿ ಅದೆಷ್ಟೋ ವಾಹನಗಳು ಹಲವು ಸರಕಾರಿ ಕಚೇರಿಗಳ ಮುಂದೆ ರಾಶಿ ಬಿದ್ದು ನಾಶಗೊಳ್ಳುತ್ತಿದೆ.  ಲಾರಿಗಳು ಯಾರಿಗೂ ಪ್ರಯೋಜನಕಾರಿಯಾಗದೆ ನಾಶಗೊಳ್ಳುವುದರಿಂದ ಅಪರಾಧ ಕೃತ್ಯಗಳು ಕೊನೆಗೊಳ್ಳುವುದಾದಲ್ಲಿ ಅದು ಸಮಾಜಕ್ಕೆ ಭಾರೀ ಪ್ರಯೋಜನಕಾರಿ ಯಾಗಿರುತ್ತಿತ್ತು. ಆದರೆ ಅಪರಾಧ ಕೃತ್ಯಗಳನ್ನು ಯಾರಿಗೂ ನಿಯಂತ್ರಿಸ ಲಾಗದ ರೀತಿಯಲ್ಲಿ ತೀವ್ರಗೊಳ್ಳುತ್ತಿದೆ.

Leave a Reply

Your email address will not be published. Required fields are marked *

You cannot copy content of this page