ರಾಜ್ಯದಲ್ಲಿ ಒಟ್ಟು ೨.೭೬ ಕೋಟಿ ಮತದಾರರು

ಕಾಸರಗೋಡು: ರಾಜ್ಯದಲ್ಲಿ ೨.೭೬ ಕೋಟಿ ಮತದಾರರಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ ಸ್ಥಳೀಯಾಡಳಿತ ಸಂಸ್ಥೆಗಳ ಕರಡು ಮತದಾರರ ಪಟ್ಟಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಇದೇ ವೇಳೆ ಪುರುಷರಿಗಿಂತ ೧೩,೧೩,೨೬೨ ಮಹಿಳೆಯರು ಹೆಚ್ಚಿದ್ದಾರೆ. ೧.೩೧ ಕೋಟಿ ಪುರುಷರು, ೧.೪೪ ಕೋಟಿ ಮಹಿಳಾ ಮತದಾರರಿದ್ದಾರೆ. ಇದೇ ವೇಳೆ ೨೪೦ ಟ್ರಾನ್ಸ್ ಜೆಂಡರ್‌ಗಳಿದ್ದಾರೆಂದು ತಿಳಿಸಲಾಗಿದೆ.

ಪಟ್ಟಿಯಲ್ಲಿ ಒಳಪಡದವರಿಗೆ ಹೆಸರು ಸೇರ್ಪಡೆಗೊಳಿಸಲು ೨೩ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ೨೦೨೩ ಜನವರಿ ೧ ಅಥವಾ ಅದಕ್ಕಿಂತ ಮುಂಚೆಯೇ ೧೮ ವರ್ಷ ಪೂರ್ತಿಯಾದವರಿಗೆ ಹೆಸರು ಸೇರ್ಪಡೆಗೊಳಿಸಬಹುದಾಗಿದೆ. ಪಟ್ಟಿಯಲ್ಲಿರುವ ಮಾಹಿತಿಗಳ ತಿದ್ದುಪಡಿ ಅಥವಾ ಸ್ಥಳ ಬದಲಾವಣೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಢಿಢಿಢಿ.qe.ebಟb.qs.ಟಿ ಎಂಬ ವೆಬ್‌ಸೈಟ್‌ನಲ್ಲಿ  ಹೆಸರು ನೋಂದಾಯಿಸಿದ ಬಳಿಕ ಅರ್ಜಿ ಸಲ್ಲಿಸಬೇಕಾಗಿದೆ. ಪಟ್ಟಿಯಿಂದ ಹೆಸರು ಹೊರತುಪಡಿಸಲು ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿದ ಪ್ರಿಂಟ್‌ಔಟ್ ನೇರವಾಗಿ ಅಥವಾ ಅಂಚೆ ಮೂಲಕ ಇಲೆಕ್ಟರಲ್ ರಿಜಿಸ್ಟ್ರೇಶನ್ ಆಫೀಸರ್‌ಗೆ ಸಲ್ಲಿಸಬೇಕು. ಕಾರ್ಪರೇಶನ್‌ಗಳಲ್ಲಿ ಅಡಿಶನಲ್ ಸೆಕ್ರೆಟರಿ, ಪಂಚಾಯತ್ ಹಾಗೂ ನಗರಸಭೆಗಳನ್ನು ಇಲೆಕ್ಟರ್ ರಿಜಿಸ್ಟ್ರೇಶನ್ ಆಫೀಸರ್ ಸೆಕ್ರೆಟರಿಯಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page