ರಾಜ್ಯದಲ್ಲಿ ಮೆದುಳು ರೋಗ ಭೀತಿ
ಕಲ್ಲಿಕೋಟೆ: ಮೆದುಳು ತಿನ್ನುವು ಅಪರೂಪದ ಸೋಂಕು ರಾಜ್ಯದಲ್ಲಿ ಈಹಿಂದೆ ಮೂವರನ್ನು ಬಲಿತೆಗೆದು ಕೊಂಡ ಬೆನ್ನಲ್ಲೇ ಕಲ್ಲಿಕೋಟೆಯಲ್ಲಿ ಇದೇ ಸೋಂಕು 14 ವರ್ಷದ ಬಾಲಕನಲ್ಲಿ ಮತ್ತೆ ದೃಢೀಕರಿ ಸಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಪತ್ತೆಯಾದ ನಾಲ್ಕನೇ ಸೋಂಕು ಪ್ರಕರಣ ಇದಾಗಿದೆ. ಇದೇ ಸೋಂಕಿಗೆ ಕಲ್ಲಿಕೋಟೆ ಫಾರೂಕ್ ಕಾಲೇಜು ಬಳಿಯ ಮುಳಿಪರಂಬ ನಿವಾಸಿ 12 ವರ್ಷದ ಬಾಲಕ, ಮಲಪ್ಪುರಂ ಮುನ್ನಿಯೂರಿನ ೫ ವರ್ಷದ ಬಾಲಕ ಮತ್ತು ಕಣ್ಣೂರು ತೊಟ್ಟಡದ 13 ವರ್ಷದ ಬಾಲಕಿ ಕಳೆದ ಎರಡು ತಿಂಗಳೊಳಗಾಗಿ ಬಲಿಯಾಗಿದ್ದಾರೆ. ಅದರ ಬೆನ್ನಲ್ಲೇ ಕಲ್ಲಿಕೋಟೆಯಲ್ಲಿ ಮತ್ತೆ ಈ ಸೋಂಕು ದೃಢೀಕರಿಸಲ್ಪಟ್ಟಿದೆ.
ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತಿದೆ. ಇದನ್ನು ಅಮೀಬಿಕ್ ಮೆನಿಂಗೋ ಎನ್ಸೆಪಾಲಿ ಟಿಸ್ ಎಂದು ಕರೆಯಲಾಗುತ್ತಿದೆ. ಈ ಸೋಂಕು ಹರಡಿಸುವ ಅಮೀಬಾ ವನ್ನು ಮೆದುಳು ತಿನ್ನುವ ಅಮೀಬಾ ಎಂದೇ ಸಾಮಾನ್ಯವಾಗಿ ಕರೆಯ ಲಾಗುತ್ತಿದೆ. ತೀವ್ರ ತಲೆನೋವು, ವಾಂತಿ, ವಾಕರಿಕೆ, ಗಟ್ಟಿಯಾಗುವ ಕುತ್ತಿಗೆ, ಗೊಂದಲ, ರೋಗಗ್ರಸ್ತವಾಗು ವಿಕೆ, ಭ್ರಮೆಗಳು, ಕೋಮ ಮತ್ತು ಜನರು ಮತ್ತು ಸುತ್ತುಮುತ್ತಲಿನ ಕಡೆಗೆ ಗಮನವಿಲ್ಲದಿರುವಿಕೆ ಇತ್ಯಾದಿ ಈ ರೋಗದ ಲಕ್ಷಣಗಳಾಗಿವೆ. ರೋಗ ಲಕ್ಷಣಗಳು ಕಲುಷಿತ ನೀರು ಸೇವಿಸಿದ ನಂತರ ಒಂದರಿಂದ ಎರಡು ದಿನಗಳೊಳಗಾಗಿ ಪ್ರಾರಂಭವಾಗುತ್ತದೆ. ನಂತರ ಅದು ಮಾರಕವಾಗುತ್ತದೆ. ವಿಶ್ವದ 10 ಲಕ್ಷಕ್ಕೆ ಎರಡು ಯಾ ಮೂರು ಜನರಲ್ಲಿ ಮಾತ್ರವೇ ಇಂತಹ ಸೋಂಕು ವರದಿಯಾಗುತ್ತದೆಯೆಂದು ವೈದ್ಯಕೀಯ ಅಂಕಿ ಅಂಶಗಳು ಸೂಚಿಸುತ್ತಿವೆ.