ರಾಜ್ಯದಲ್ಲಿ ವಿದ್ಯುತ್ ಸಂದಿಗ್ಧತೆ ತೀವ್ರ ನಿಯಂತ್ರಣ ಸಾಧ್ಯತೆ: ಸರ್ಚಾರ್ಜ್ ಪರಿಗಣನೆಯಲ್ಲಿ
ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಸಂದಿಗ್ಧತೆ ತೀವ್ರಗೊಂಡಿದೆ ಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಓಣಂ ಬಳಿಕ ಉತ್ತಮ ಮಳೆ ಸುರಿಯದಿದ್ದಲ್ಲಿ ವಿದ್ಯುತ್ ನಿಯಂತ್ರಣ ಬೇಕಾಗಿ ಬರಲಿದೆ. ಅಲ್ಲದೆ ಸರ್ಚಾರ್ಜ್ ಹೇರುವ ಬಗ್ಗೆಯೂ ಪರಿಗಣೆಯಲ್ಲಿದೆ ಎನ್ನಲಾಗಿದೆ.
ಇದೀಗ ಹೊರಗಿನಿಂದ ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸಿ ರಾಜ್ಯದಲ್ಲಿ ಬಳಸಲಾಗುತ್ತಿದೆ. ಈ ಮೂಲಕ ಪ್ರತಿದಿನ ೧೦ ಕೋಟಿ ರೂಪಾಯಿಗಳ ನಷ್ಟ ಉಂಟಾಗುತ್ತಿದೆಯೆಂದು ಕೆ.ಎಸ್. ಇ.ಬಿ ತಿಳಿಸುತ್ತಿದೆ. ಮಳೆ ಕಡಿಮೆ ಯಾಗಿರುವುದು ಹಾಗೂ ಹೊರಗಿನ ಮೂರು ಕಂಪೆನಿಗಳಿಂದ ವಿದ್ಯುತ್ ಖರೀದಿಸಲಿರುವ ಗುತ್ತಿಗೆ ರದ್ದುಪಡಿಸಿ ರುವುದು ತಿರುಗೇಟಾಗಿ ಪರಿಣಮಿ ಸಿದೆ. ಆದ್ದರಿಂದ ಉಂಟಾಗಿರುವ ನಷ್ಟ ಭರ್ತಿಗೊಳಿಸಲು ಗ್ರಾಹಕರಿಂದ ಸರ್ಚಾರ್ಜ್ ವಸೂಲು ಮಾಡು ವುದು ಕೂಡಾ ಪರಿಗಣನೆಯಲ್ಲಿದೆ. ಮುಂದಿನ ವಾರ ಕೆಎಸ್‌ಇಬಿ ಚೆಯರ್ ಮೆನ್ ನೀಡುವ ವರದಿಯನ್ನು ಅನುಸರಿಸಿ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲದ ಸ್ಥಿತಿ ಉಂಟಾಗಿದೆ. ಆದ್ದರಿಂದ ಹೆಚ್ಚುವರಿ ವಿದ್ಯುತ್ ಹೊರಗಿನಿಂದ ಹಣ ನೀಡಿ ಖರೀದಿಸಬೇಕಾಗಿ ಬರಲಿದೆಯೆಂದು ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ.
ತೆರಿಗೆ ಹೆಚ್ಚಿಸದೆ ಮುಂದೆ ಸಾಗಲು ಸಾಧ್ಯವಿಲ್ಲ. ಎಷ್ಟು ಬೆಲೆಗೆ ವಿದ್ಯುತ್ ಖರೀದಿಸಲಾಗುತ್ತಿದೆ ಎಂ ಬುವುದನ್ನು ಅನುಸರಿಸಿ ತೆರಿಗೆ ಹೆಚ್ಚಳ ನಿರ್ಧರಿಸಲಾಗುವುದು. ಆ ಬಗ್ಗೆ ರೆಗಲೇಟರಿ ಮಂಡಳಿ ನಿರ್ಧರಿಸಲಿ ದೆಯೆಂದೂ ಸಚಿವ ತಿಳಿಸಿದ್ದಾರೆ.