ರಾಜ್ಯದ ಎಲ್ಲಾ ದನಗಳಿಗೂ ವಿಮೆ ಸಂರಕ್ಷಣೆ-ಸಚಿವೆ

ತಿರುವನಂತಪುರ:  ರಾಜ್ಯದ ಎಲ್ಲಾ ದನಗಳಿಗೂ ವಿಮೆ ಸಂರಕ್ಷಣೆ ಖಚಿತಪಡಿಸಲು  ಕೇಂದ್ರ ಸರಕಾರದ ಜೊತೆಗೂಡಿ ಯೋಜನೆಗೆ  ರೂಪು ನೀಡುತ್ತಿ ರುವುದಾಗಿ ಸಚಿವೆ ಜೆ. ಚಿಂಜುರಾಣಿ ನುಡಿದರು.  ಕೇಂದ್ರ ಸರಕಾರದ ಒಪ್ಪಿಗೆ ಲಭಿಸಿದರೆ ಮೂರು ವರ್ಷದಲ್ಲಿ ಈ ಕಾರ್ಯ ಜ್ಯಾರಿಯಾಗುವು ದೆಂದ ಸಚಿವೆ ತಿಳಿಸಿದರು. ವೆಳ್ಳಿ ಯಾಮಾಟಂ ಕೆ.ಕೆ.ಪರಂಬಿಲ್ ಮ್ಯಾಥ್ಯೂ ಬೆನ್ನಿ ಎಂಬ ಕೃಷಿಕನ ಮನೆಗೆ ಭೇಟಿ ನೀಡಿದ ಸಚಿವೆ ಈ ವಿಷಯ ತಿಳಿಸಿದ್ದಾರೆ.  ಮ್ಯಾಥ್ಯು  ಬೆನ್ನಿಯ ೧೩ ಹಸುಗಳು ವಿಷಾಹಾರ ಸೇವಿಸಿ ಅಸುನೀಗಿ ದ್ದವು. ಈ ಹಿನ್ನೆಲೆಯಲ್ಲಿ ಸಚಿವ ರೋಶಿ ಅಗಸ್ಟಿನ್ ಜೊತೆ ಚಿಂಜು ರಾಣಿ ಅಲ್ಲಿಗೆ ಭೇಟಿ ನೀಡಿದ್ದರು.

Leave a Reply

Your email address will not be published. Required fields are marked *

You cannot copy content of this page