ರಾಧಾಕೃಷ್ಣ ಉಳಿಯತ್ತಡ್ಕ, ನೀರ್ಚಾಲು ವಿದ್ಯಾವರ್ಧಕ ಸಂಘಕ್ಕೆ ಗಡಿನಾಡ ಚೇತನ ಪ್ರಶಸ್ತಿ ಇಂದು ಪ್ರದಾನ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 2 ವರ್ಷಗಳ ಗಡಿನಾಡ ಚೇತನ ಪ್ರಶಸ್ತಿ ಘೋಷಿಸಲಾಗಿದ್ದು, 2023-24ನೇ ವರ್ಷದ ಪ್ರಶಸ್ತಿಗೆ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಆಯ್ಕೆಯಾಗಿದ್ದಾರೆ. ಇಂದು ಮಹಾರಾಷ್ಟ್ರದ ಸಾಂಗ್ಲಿಜಿತ್ತ ತಾಲೂಕಿನ ಗುಡ್ಡಾಪುರದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ತಿಳಿಸಿದ್ದಾರೆ.

ಡಾ. ಜಯದೇವಿ ತಾಯಿಲಿಗಾಡೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ಮತ್ತು ಡಾ. ಚನ್ನಬಸವ ಪಟ್ಟದ್ದೇವರು ಇವರ ಹೆಸರಲ್ಲಿ ಗಡಿ ಪ್ರಾಧಿಕಾರದ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ.

2023-24ರ ಡಾ. ಚನ್ನಬಸವ ಪಟ್ಟದ್ದೇವರು ಪ್ರಶಸ್ತಿಗೆ ರಾಧಾಕೃಷ್ಣ್ಣ ಉಳಿಯತ್ತಡ್ಕ ಆಯ್ಕೆಯಾಗಿದ್ದಾರೆ. 2024-25ರ ಪ್ರಶಸ್ತಿಗೆ ಗುಜರಾತಿನ ಅಹಮ್ಮದಾಬಾದ್‌ನ ಕರ್ನಾಟಕ ಸಂಘ ಆಯ್ಕೆಯಾಗಿದೆ. ಇದರ ಜತೆಯಲ್ಲಿ ನೀಡುವ ಡಾ. ಜಯದೇವಿ ತಾಯಿ ಲಿಗಾಡೆ ಗಡಿನಾಡ ಚೇತನ ಪ್ರಶಸ್ತಿಗೆ ಬೀದರದ ಪಂಚಾಕ್ಷರಿ ಪುಣ್ಯ  ಶೆಟ್ಟಿ, ಕಯ್ಯಾರ ಕಿಂಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಗೆ ಬೆಳಗಾವಿಯ ಬಿ.ವಿ.ಎಸ್. ಗವಿಮಠ ಆಯ್ಕೆಯಾಗಿದ್ದಾರೆ. ೨೪-೨೫ನೇ ವರ್ಷದ ಪ್ರಶಸ್ತಿಗೆ ಜಯದೇವಿ ತಾಯಿ ಲಿಗಾಡೆ ಚೇತನ ಪ್ರಶಸ್ತಿಗೆ ಮಹಾ ರಾಷ್ಟ್ರದ ಸಂಖದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ, ಉಮದಿಯ ಸರ್ವೋದಯ ಶಿಕ್ಷಣ ಸಂಸ್ಥೆ, ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿಗೆ ನೀರ್ಚಾಲು ಮಹಾಜನ ವಿದ್ಯಾವರ್ಧಕ ಸಂಘ ಆಯ್ಕೆಯಾಗಿದೆ. ಪ್ರಶಸ್ತಿಯ ಹಲ್ಮಿಡಿ ಶಾಸನದ ಮಾದರಿಯ ಸ್ಮರಣಿಕೆ, ಪ್ರಮಾಣಪತ್ರ, ಒಂದು ಲಕ್ಷ ರೂ. ಒಳಗೊಂಡಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page