‘ರಾಮ್ ಲಲ್ಲಾ’ ವಿಗ್ರಹ ತಾತ್ಕಾಲಿಕ ಟೆಂಟ್‌ನಿಂದ ಇಂದು ದೇವಾಲಯ ಪ್ರವೇಶ

ಅಯೋಧ್ಯೆ: ಅಯೋಧ್ಯೆಯಲ್ಲಿ ೫೦೦ ವರ್ಷಗಳ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ರಾಮ್‌ಲಲ್ಲಾ ವಿಗ್ರಹ ತನ್ನ ತಾತ್ಕಾಲಿಕ  ಟೆಂಟ್‌ನಿಂದ ಇಂದು ಮುಖ್ಯ ದೇವಾಲಯ ಪ್ರವೇಶಿಸಲಿದೆ. ಅಂದರೆ ಐನೂರು ವರ್ಷಗಳ ನಂತರ ಶ್ರೀರಾಮ್ ಲಲ್ಲಾ ತನ್ನ ದೇವಾಲಯಕ್ಕೆ ಮರಳುತ್ತಿದ್ದಾನೆ. ಜನವರಿ ೨೨ರಂದು ಇದರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಿಂದಾಗಿ  ಇಂದಿನಿಂದ ಅಯೋಧ್ಯೆಗೆ ಹೊರಗಿನವರನ್ನು ಪ್ರವೇಶಿಸಬಿಡಲಾಗುವುದಿಲ್ಲವೆಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಐನೂರು ವರ್ಷ ಗಳ ಸುಧೀರ್ಘ ಹೋರಾಟದ ಬಳಿಕ ಇಂದು ರಾಮಲಲ್ಲಾ ತನ್ನ ತಾತ್ಕಾಲಿಕ ಟೆಂಟ್‌ನಿಂದ ದೈವಿಕ ಮತ್ತು ಭವ್ಯವಾದ ದೇವಾಲಯ ಪ್ರವೇಶಿಸುವಾಗ ಅದು ಸನಾತನ ಧರ್ಮದವರಿಗೆ ನಿಜವಾಗಿಯೂ ಐತಿಹಾಸಿಕ ಕ್ಷಣವಾಗಲಿದೆ. ರಾಮಮಂದಿರ ಕೇವಲ ಮಂದಿರ ಮಾತ್ರವಲ್ಲ. ೫೦೦ ವರ್ಷಗಳ ತನಕ ನಡೆಸಿದ ಹೋರಾಟದ ವಿಜಯ ಫಲಿತಾಂಶವಾಗಿದೆ ಎಂದು ಶ್ರೀ ಕ್ಷೇತ್ರದ ಟ್ರಸ್ಟ್ ಪದಾಧಿಕಾರಿಗಳು ಹೇಳಿದ್ದಾರೆ.

ರಾಮಮಂದಿರ ಒಂದು ಮಂದಿರ ಕಟ್ಟಡವಲ್ಲ, ಅದು ಒಂದು ಧಾರ್ಮಿಕ ಭಾವನೆ. ರಾಮ ಮಂದಿರ ನಿರ್ಮಾಣವು ೫೦೦ ವರ್ಷಗಳ ತಪಸ್ಸಿನ ಫಲಿತಾಂಶವಾಗಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಂಭ್ರಮದಲ್ಲಿ ಇಡೀ ದೇಶವೇ ಮುಳುಗಿದೆ ಎಂದು ಅವರು ಹೇಳಿದ್ದಾರೆ. ಪ್ರತಿಷ್ಠಾಪನಾ ಸಮಾರಂಭದಂಗವಾಗಿ ಇಡೀ ಅಯೋಧ್ಯೆ ನಗರದಲ್ಲಿ ಬಿಗಿ ಭದ್ರತೆಯ ಸರ್ಪಕಾವಲು ಏರ್ಪಡಿಸಲಾಗಿದೆ.

ಮೂವರು ಡಿಐಜಿಗಳು, ೧೭ ಐಪಿಎಸ್, ೧೦೦ ಐ.ಪಿ.ಎಸ್ ಮಟ್ಟದ ಅಧಿಕಾರಿಗಳನ್ನು ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ. ಇವರಂದಿಗೆ ೧೦೦೦ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, ೮೦೦ ಸಬ್ ಇನ್ಸ್‌ಪೆಕ್ಟರ್‌ಗಳು, ಸಹಸ್ರಾರು ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ.

ಪಿಸಿಯ ಮೂರು ತುಕಡಿಗಳನ್ನೂ ಕೆಂಪು ವಲಯದಲ್ಲೂ, ಏಳು ಬೆಟಾಲಿಯನ್‌ಗಳನ್ನು ಹಳದಿ ವಲಯದಲ್ಲೂ ನಿಯೋಜಿಸಲಾಗಿದೆ. ಇದರ ಹೊರತಾಗಿ ಕೇಂದ್ರ ಭದ್ರತಾ ಪಡೆಗಳು ಮತ್ತು ಬಾಂಬ್ ಸ್ಕ್ವಾಡ್‌ಗಳು, ನುರಿತ ತರಬೇತಿ ಪಡೆದ ಕಮಾಂಡರ್‌ಗಳನ್ನು ನೇಮಿಸಲಾಗಿದೆ. ಮಾತ್ರವಲ್ಲ ಆಕಾಶಮಾರ್ಗವಾಗಿ ಡ್ರೋನ್ ಹಾಗೂ ವೈಮಾ ನಿಕ ಕಣ್ಗಾವಲು ಭದ್ರತೆ ಗಳನ್ನೂ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page