ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ: ನಾಳೆ ೩೬೦೦೩೫ ಮಕ್ಕಳಿಗೆ ಮಾತ್ರೆ ವಿತರಣೆ

ಕಾಸರಗೋಡು: ನಾಳೆ ರಾಷ್ಟ್ರೀಯ ಜಂತುಹುಳು ವಿಮುಕ್ತ ದಿನವಾಗಿ ಆಚರಿಸಲಾಗುವುದು. ದಿನಾಚರಣೆಯಂಗ ವಾಗಿ ೧ರಿಂದ ೧೯ ವರ್ಷದವರೆಗಿನ ಮಕ್ಕಳಿಗೆ ಹುಳುನಾಶಕ ಆಲ್‌ಬೆಂಡ್ ಜೋಲ್ ಮಾತ್ರೆಗಳನ್ನು ನೀಡಲಾಗು ವುದು. ಮಣ್ಣಿನ ಮೂಲಕ ಹರಡುವ ಜಂತು ಹುಳುಗಳು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದುಕೊಂ ಡಿದೆ. ೬೫ ಶೇ. ಮಕ್ಕಳಿಗೂ ಜಂತು ಹುಳು ಬಾಧೆ ಇದೆ ಎಂದು ವರದಿಗಳು ತಿಳಿಸುತ್ತಿವೆ. ಆಯಾಸ, ಪೌಷ್ಠಿಕತೆಯ ಕೊರತೆ, ಹಸಿವಿಲ್ಲದಿರುವುದು, ವಾಂತಿ, ಬೇಧಿ, ಮಲದಲ್ಲಿ ರಕ್ತ ಇದೆಲ್ಲ ಜಂತು ಹುಳದಿಂದಾಗಿ ಉಂಟಾಗುವ ಲಕ್ಷಣಗಳು. ಹಣ್ಣು ಹಾಗೂ ತರಕಾರಿಗಳನ್ನು ಸರಿಯಾಗಿ ಶುಚಿಗೊಳಿಸದೆ ಉಪಯೋಗಿಸಿದರೂ, ನೀರು ಶುದ್ಧವಿಲ್ಲದಿದ್ದರೂ, ಕೈಗಳನ್ನು ತೊಳೆಯದೆ ಆಹಾರ ಸೇವಿಸುವು ದರಿಂದಲೂ ರೋಗ ತಗಲಲು ಸಾಧ್ಯತೆ ಇದೆ. ಮಕ್ಕಳಲ್ಲಿ ಆರು ತಿಂಗಳಿಗೊಮ್ಮೆ ಹುಳು ಮಾತ್ರೆ ನೀಡಿದರೆ ಇದನ್ನು ತಡೆಯಲು ಸಾಧ್ಯವಿದೆ.

೧ರಿಂದ ೧೯ ವರ್ಷದ ವರೆಗಿನವರಿಗೆ ಶಾಲೆಗಳಲ್ಲೂ ಅಂಗನವಾಡಿಗಳಲ್ಲೂ ಮಾತ್ರೆ ನೀಡಲಾಗುವುದು. ೧ರಿಂದ ೨ ವರ್ಷದವರೆಗಿನ ಮಕ್ಕಳಿಗೆ ಅರ್ಥ ಮಾತ್ರೆ, ೨-೩ ಒಂದು ಮಾತ್ರೆ ನೀಡಬೇಕಾಗಿದೆ. ೩-೧೯ರವರೆಗಿನವರು ಆಹಾರ ಬಳಿಕ ಒಂದು ಮಾತ್ರೆಯನ್ನು ಜಗಿದು ನುಂಗಬೇಕು. ಜೊತೆಗೆ ಒಂದು ಗ್ಲಾಸ್ ನೀರು ಕುಡಿಯಬೇಕು. ನಾಳೆ ೩೬೦೦೩೫ ಮಕ್ಕಳಿಗೆ ಮಾತ್ರೆ ನೀಡಲಾಗುವುದು. ನಾಳೆ ಅಸೌಖ್ಯವಾದವರಿಗೆ ೧೫ರಂದು ಅಂಗನವಾಡಿಗಳ ಮೂಲಕ ವಿತರಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page