ರಾಷ್ಟ್ರೀಯ ಹೆದ್ದಾರಿ ಚರಂಡಿ ಅವ್ಯವಸ್ಥೆ : ಮೊಗ್ರಾಲ್‌ನ ತಗ್ಗು ಪ್ರದೇಶಗಳು ಜಲಾವೃತ

ಕಾಸರಗೋಡು: ಮೊಗ್ರಾಲ್ ಹೊಳೆ ಉಕ್ಕಿ ಹರಿದ ಪರಿಣಾಮ ಮೊಗ್ರಾಲ್ ಕಡವತ್‌ನ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಿಂದ ಈ ಸಮಸ್ಯೆ ಎದುರಾಗಿದೆ ಎಂದು ದೂರಲಾಗಿದೆ. ಇದೇ ವೇಳೆ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಹೊಳೆಗೆ ನೀರು ಹರಿದು ಹೋಗುತ್ತಿಲ್ಲ. ಈ ನೀರು ಮೊಗ್ರಾಲ್ ಕಡವತ್‌ನಲ್ಲಿ ತುಂಬಿಕೊಂಡು ಮನೆಯೊಳಗೆ ನುಗ್ಗುವಂತಾಗಿದೆ. ಈ ರೀತಿ ತುಂಬಿಕೊಂಡಿರುವ ಮಳೆ ನೀರನ್ನು ತೆರವುಗೊಳಿಸಿ ಇಲ್ಲಿ ನೀರು ತುಂಬದಿರಲು ಶಾಶ್ವತ ಪರಿಹಾರ ಕಾಣಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page