ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಪುಲ್ಲೂರು ಸೇತುವೆಯ ಗಾರ್ಡರ್ ಕುಸಿದು ದುರಂತ

ಕಾಸರಗೋಡು: ನೂತನವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಪುಲ್ಲೂರು ಮೇಲ್ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಪಶ್ಚಿಮ ಭಾಗದ ಒಂದು ಗಾರ್ಡರ್ ಕಾಂಕ್ರೀಟ್  ಸ್ಲ್ಯಾಬ್ ಸಹಿತ ಕುಸಿದಿದೆ. ನಿನ್ನೆ ಸಂಜೆ ಈ ದುರಂತ ಸಂಭವಿಸಿದೆ.  ಈ ಸಮಯದಲ್ಲಿ ಕಾರ್ಮಿಕರು ಇನ್ನೊಂದು ಭಾಗದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಕಾರಣ ಅಪಾಯ ಸಂಭವಿಸಲಿಲ್ಲ. ಭಾರೀ ಶಬ್ದದೊಂದಿಗೆ ಗಾರ್ಡರ್ ಕೆಳಗೆ ಬಿದ್ದಾಗ 200 ಮೀಟರ್ ದೂರದವರೆಗೆ ಇದರ  ಕಂಪನವುಂಟಾಗಿದೆಯೆಂದು ಪರಿಸರ ನಿವಾಸಿಗಳು ತಿಳಿಸಿದ್ದಾರೆ. ತಿಂಗಳುಗಳ ಹಿಂದೆ ಇಲ್ಲಿ ಗಾರ್ಡರ್ ಸ್ಥಾಪಿಸಲಾಗಿತ್ತು.  ಇದರ ಮೇಲೆ  ಇತ್ತೀಚೆಗೆ ಕಾಂಕ್ರೀಟ್ ನಡೆಸಲಾಗಿತ್ತು. ಶಬ್ದ ಕೇಳಿ ಪರಿಸರದವರು ತಲುಪಿ ಕುಸಿದುಬಿದ್ದ ದೃಶ್ಯವನ್ನು ಸೆರೆಹಿಡಿಯುವ ವೇಳೆ ನಿರ್ಮಾಣ ನಡೆಸುತ್ತಿರುವ ಮೇಗಾ ಕನ್‌ಸ್ಟ್ರಕ್ಷನ್ ಕಂಪೆನಿ ಅಧಿಕಾರಿಗಳು ತಡೆದಿರುವುದು ವಾಗ್ವಾದಕ್ಕೆ ಕಾರಣವಾಯಿತು. ಇದನ್ನು ಪ್ರತಿಭಟಿಸಿ ಸ್ಥಳೀಯರು  ದುರಂತ ಸ್ಥಳವನ್ನು ಶೀಟ್ ಹಾಕಿ ಮರೆಮಾಚುವುದನ್ನು ತಡೆದರು.  ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಎರಡು ಸೇತುವೆಗಳಿಗೆ ಬದಲಾಗಿ 20 ಮೀಟರ್ ಉದ್ದದಲ್ಲಿರುವ ಎರಡು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಪೂರ್ತಿಯಾಗಿದೆ. ಪುಲ್ಲೂರು ತೋಡಿಗೆ ನಿರ್ಮಿಸುವ ಸೇತುವೆಯ ಗಾರ್ಡರ್ ನೆಲಕ್ಕೆ ಕುಸಿದಿರುವುದು.

ದುರಂತಕ್ಕೆ ಕಾರಣ ಸ್ಪಷ್ಟ ವಲ್ಲವೆಂದು ಹೊರಗಿನ  ಏಜೆನ್ಸಿ ಮೂಲಕ ತನಿಖೆ ನಡೆಸಲಾಗುವು ದೆಂದು ನಿರ್ಮಾಣ ಹೊಣೆ ವಹಿಸಿ ಕೊಂಡಿರುವ ಮೆಗಾ ಕನ್‌ಸ್ಟ್ರಕ್ಷನ್ ಅಧಿಕಾರಿಗಳು ತಿಳಿಸಿದ್ದಾರೆ.

2022 ಅಕ್ಟೋಬರ್ 29ರಂದು ಮುಂಜಾನೆ ಪೆರಿಯಾದಲ್ಲಿ ನಿರ್ಮಾಣ ನಡೆಯುತ್ತಿದ್ದ ಅಂಡರ್ ಪಾಸ್‌ನ  ಮೇಲ್ಭಾಗ ಪೂರ್ಣವಾಗಿ ಕುಸಿದುಬಿದ್ದಿತ್ತು. ಈ ವೇಳೆ ಕಾರ್ಮಿಕರಿಗೆ ಗಾಯವುಂಟಾಗಿತ್ತು.  ಈ ಬಗ್ಗೆ ತನಿಖೆ ನಡೆಸಲಾಗಿದ್ದರೂ ಯಾವುದೇ ಕ್ರಮ ಉಂಟಾಗಿಲ್ಲ.

You cannot copy contents of this page