ರಾಷ್ಟ್ರೀಯ ಹೆದ್ದಾರಿ 66: ತಲಪ್ಪಾಡಿ-ಚೆಂಗಳ ಸಹಿತ ನಾಲ್ಕು ರೀಚ್‌ಗಳಲ್ಲಿ ಮೇ 31ರಿಂದ ವಾಹನ ಸಂಚಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆ ಈಗ ಭರದಿಂದ ಸಾಗುತ್ತಿದ್ದು, ಆಪೈಕಿ ತಲಪ್ಪಾಡಿ-ಚೆಂಗಳ (39 ಕಿ.ಮೀ) ಸೇರಿದಂತೆ ನಾಲ್ಕು ರೀಚ್ಗಳ ನಿರ್ಮಾಣ ಕೆಲಸ ಈಗ ಅಂತಿಮ ಹಂತದಲ್ಲಿದೆ. ಅವುಗಳನ್ನು ಮೇ 31ರಿಂದ ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸೂಚನಾ ಫಲಕ ಗಳನ್ನು ಅಳವಡಿಸಲಾಗುವುದು. ಅಂದರೆ ತಿರುವು, ವೇಗಮಿತಿ ಪ್ರದೇಶಗಳಲ್ಲಿ ಅಪಾಯಸೂಚನಾ ಫಲಕಗ ಳನ್ನು ಸ್ಥಾಪಿಸಲಾಗುವುದು. ತಲಪ್ಪಾಡಿ-ಚೆಂಗಳದ ಹೊರತಾಗಿ ವೆಂಙಳA(ಕಲ್ಲಿಕೋಟೆ ಬೈಪಾಸ್-28.4 ಕಿ.ಮೀ.), ರಾಮನಾಟ್ಟುಕರೆ-ವಳಾಂಚೇರಿ (39.68 ಕಿ.ಮಿ.) ಮತ್ತು ವಳಾಂಚೇರಿ-ಕಾಪಿರಿಕ್ಕಾಡು (34.35 ಕಿ.ಮೀ) ಎಂಬೀ ರೀಚ್ಗಳನ್ನು ಮೇ 31ರಿಂದ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸಂಚಾರಕ್ಕೆ ತೆರೆದುಕೊಡಲು ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲೆಯ ತಲಪ್ಪಾಡಿಯಿಂದ ಆರಂಭಗೊAಡು ತಿರುವನಂತಪುರ ಜಿಲ್ಲೆಯ ಮುಕ್ಕೂಲೆ ತನಕ ಒಟ್ಟು 22 ರೀಟ್ಗಳಲ್ಲಾಗಿ 644 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸ ಈಗ ನಡೆಯುತ್ತಿದೆ. ಇದರಲ್ಲಿ ತಲಪ್ಪಾಡಿ-ಚೆಂಗಳ ನಡುವಿನ 39 ಕಿ.ಮೀ. ರಸ್ತೆಯ ಅಭಿವೃದ್ಧಿ ನಿರ್ಮಾಣ ಕೆಲಸದ ಗುತ್ತಿಗೆಯನ್ನು ಊರಾಳುಂಗಾಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿಗೆ ವಹಿಸಿಕೊಡಲಾಗಿದೆ.
ರಾಜ್ಯದ ಒಟ್ಟು 22 ರೀಚ್ಗಳ ಪೈಕಿ 17 ರೀಚ್ಗಳ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ಬಾಕಿ ಉಳಿದುಕೊಂಡಿದೆ. ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 45 ಮೀಟರ್ ಅಗಲದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ಹೊರತಾಗಿ ಇಕ್ಕಡೆಗಳಲ್ಲಿ ತಲಾ 6.75 ಮೀಟರ್ ಅಗಲದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ಹೊರತಾಗಿ ಇಕ್ಕಡೆಗಳಲ್ಲಿ ತಲಾ ಎರಡು ಮೀಟರ್ನಷ್ಟು ಅಗಲದಲ್ಲಿ ನಡೆ ಹಾದಿ (ಯೂಟಿಲಿಟಿ ಕಾರಿಡಾರ್ ವಿದ್ ಫೂಟ್ ಪಾತ್) ನಿರ್ಮಿಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page