ರಾಹುಲ್‌ಗೆ ಮತ್ತೆ ಸಂಕಷ್ಟ: ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ

ನವದೆಹಲಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯರನ್ನಾಗಿ ಮರು ನೇಮಿಸಿದ ಲೋಕಸಭೆಯ ಸಚಿವಾಲಯದ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಸಂಸದರು ಒಮ್ಮೆ ಕಾನೂನಿನ ಕಾರ್ಯಾಚರಣೆಯಿಂದ ತಮ್ಮ ಸ್ಥಾನ ಕಳೆದುಕೊಂಡರೆ  ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಸಂಸದರಾಗಿ ಮರುನೇಮಿಸಲು ಸಾಧ್ಯವಿಲ್ಲವೆಂಬ ವಾದವನ್ನು ಅರ್ಜಿಯಲ್ಲಿ ಮಂಡಿಸಲಾಗಿದೆ.  ಈ ಗೌರವಾನ್ವಿತ ನ್ಯಾಯಾಲಯದ ದಯೆಯ ಪರಿಗಣನೆಗೆ ಇನ್ನೊಂದು ಪ್ರಶ್ನೆಯೆಂದರೆ ಶಿಕ್ಷೆಗೊಳಗಾದ ಶಾಸಕರ ಯಾ ಸಂಸದರ ಸದಸ್ಯತ್ವವನ್ನು ಕಳೆದುಕೊಳ್ಳುವ ಅಧಿಸೂಚನೆಯನ್ನು ಸಂಬಂಧಪಟ್ಟ ಸದನದ ಅಧ್ಯಕ್ಷರು (ಸ್ಪೀಕರ್) ಸೂಚಿಸುತ್ತಾರೆಯೇ ಅಥವಾ ಇದು ಭಾರತದ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಗೆ ಸೇರಿದ್ದಾಗಿದೆಯೇ ಎಂದೂ  ಅರ್ಜಿಯಲ್ಲಿ ಕೇಳಲಾಗಿದೆ.

ಮೋದಿ ಉಪನಾಮೆ ಹೆಸರಿನ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯ ರಾಹುಲ್ ಗಾಂಧಿಗೆ  ನೀಡಿದ ಎರಡು ವರ್ಷಗಳ  ಸಜೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ದಿನಗಳ ನಂತರ ಅಗೋಸ್ತ್‌ನಲ್ಲಿ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವವನ್ನು ಪುನಃ ಸ್ಥಾಪಿಸಲಾಯಿತು. ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಕಾನೂನಿನ ಕಾರ್ಯಾಚರಣೆ ಯಿಂದ ಶಾಸಕರ ಅಥವಾ ಸಂಸದರು ತಮ್ಮ  ಸ್ಥಾನ ಕಳದುಕೊಂಡ ನಂತರ ಅವರು ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಸಂಸದರಾಗಿ ಮರುನೇಮಿಸುವುದು ಸರಿಯೇ ಎಂದು   ಮನವಿಯಲ್ಲಿ  ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page