ರಾಹುಲ್ ಗಾಂಧಿಯನ್ನು ವಿವಾಹವಾಗಲು ಸಿದ್ಧವೆಂದು ಶರ್ಲಿನ್ ಚೋಪ್ರ

ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು  ವಿವಾಹವಾಗಲು ಸಿದ್ಧವೆಂದು ಪ್ರಸಿದ್ಧ ಚಲನಚಿತ್ರನಟಿ ಶರ್ಲಿನ್ ಚೋಪ್ರ ನುಡಿದಿದ್ದಾರೆ. ರಾಹುಲ್ ಗಾಂಧಿಯವರ ವಿರುದ್ಧದ ಅಪಮಾನಕರ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿ  ಪತ್ರಿಕಾ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ಹೇಳುತ್ತಿರುವ ಮಧ್ಯೆ ಶರ್ಲಿನ್ ಚೋಪ್ರ ಈ ವಿಷಯ ತಿಳಿಸಿದ್ದಾರೆ. ನ್ಯಾಯಾಲಯದ  ತೀರ್ಪಿನಲ್ಲಿ ಸಂತೋಷವಿದೆಯೆಂದು ಪ್ರತಿಕ್ರಿಯಿಸಿದ ನಟಿ ರಾಹುಲ್‌ರನ್ನು ವಿವಾಹವಾಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ  ‘ಹೌದು’ ಎಂದು ಉತ್ತರಿಸಿದರು.  ಮಾತ್ರವಲ್ಲ ಯಾಕಾಗಿ ರಾಹುಲ್ ಗಾಂಧಿಯವರನ್ನು ವಿವಾಹ ಮಾಡಬಾರದು ಎಂದು ಕೂಡಾ ಅವರು ಮರು ಪ್ರಶ್ನೆ ಹಾಕಿದ್ದಾರೆ. ಆದರೆ ವಿವಾಹದ ವಿಷಯದಲ್ಲಿ ಕೆಲವು ನಿಬಂಧನೆಗಳಿದೆಯೆಂದು ಅವರು ನುಡಿದರು. ವಿವಾಹದ ಬಳಿಕವೂ ಚೋಪ್ರ ಎಂಬ ಹೆಸರು ಬದಲಿಸೆನು ಎಂದು ಸ್ಪಷ್ಟಪಡಿಸಿದ ಅವರು ರಾಹುಲ್ ಓರ್ವ ಉತ್ತಮ ವ್ಯಕ್ತಿಯೆಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page