ರಿಯಾಸ್ ಮೌಲವಿ ಕೊಲೆ ಪ್ರಕರಣ:  ತನಿಖೆಯಲ್ಲಿ ಲೋಪದೋಷ ಉಂಟಾಗಿಲ್ಲ-ಮುಖ್ಯಮಂತ್ರಿ

ಕಲ್ಲಿಕೋಟೆ: ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೊಹ ಮ್ಮದ್ ರಿಯಾಸ್ ಕೊಲೆ ಅತ್ಯಂತ ಗಂಭೀರ ಪ್ರಕರಣವಾಗಿದೆ. ಈ ಕೊಲೆ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗಿಲ್ಲ.  ಕೊಲೆ ಪ್ರಕರಣದ ತನಿಖೆಯನ್ನು  ಸರಕಾರ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದೆಯೆಂದು ರಾಜ್ಯ ಗೃಹ ಸಚಿವರೂ ಆಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗೆ ತಿಳಿಸಿದ್ದಾರೆ.

ತನಿಖೆಯಲ್ಲಿ ಉಂಟಾಗಿರುವ ಲೋಪದೋಷಗಳೇ ರಿಯಾಸ್ ಮೌಲವಿ  ಕೊಲೆ ಪ್ರಕರಣದ ಆರೋ ಪಿಗಳು ಖುಲಾಸೆಗೊಳ್ಳಲು ಪ್ರಧಾನ ಕಾರ ಣವೆಂದು  ವಿಪಕ್ಷಗಳು ಆರೋಪಿಸು ತ್ತಿದ್ದು, ಅಂತಹ ಆರೋಪಗಳಿಗೆ ಮುಖ್ಯಮಂತ್ರಿ ಈ ಸ್ಪಷ್ಟೀಕರಣ ನೀಡಿದ್ದಾರೆ.

೨೦೧೭ ಮಾರ್ಚ್ ೨೦ರಂದು ರಾತ್ರಿ ರಿಯಾಸ್ ಮೌಲವಿಯವರನ್ನು ಅವರ ವಾಸಸ್ಥಳದಲ್ಲೇ ಕೊಲೆಗೈಯ್ಯ ಲಾಗಿತ್ತು. ಅದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಕೊಲೆ ನಡೆದ  ಮೂರು ದಿನಗಳೊಳಗಾಗಿ ಆರೋಪಿಗಳನ್ನು ಬಂ ಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ತನಿಖೆಗಾಗಿ ವಿಶೇಷ ತನಿಖಾ ತಂಡಕ್ಕೂ ರೂಪು ನೀಡಲಾಗಿದೆ. ತನಿಖಾ ತಂಡ ತಳೆದ ಕಠಿಣ ನಿಲುವಿನಿಂದಾಗಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಕನಿಷ್ಠ ಜಾಮೀನು ಕೂಡಾ ಲಭಿಸದೆ ೭ ವರ್ಷ ಮತ್ತು ೭ ದಿನಗಳ ತನಕ ಅವರು ನ್ಯಾಯಾಂಗ ಬಂಧನದಲ್ಲೇ  ಕಳೆದು ಜ್ಯುಡೀಶಿಯಲ್ ಕಸ್ಟಡಿಯಲ್ಲೇ  ವಿಚಾರಣೆ ಎದುರಿಸಬೇಕಾಗಿ ಬಂದಿತ್ತು. ಕೊಲೆ ನಡೆದ ೮೮ ದಿನಗಳೊಳಗಾಗಿ ಈ ಪ್ರಕರಣದ ಚಾರ್ಜ್ ಶೀಟ್ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ರಿಯಾಸ್ ಮೌಲವಿಯವರ ಪತ್ನಿ ಮಾಡಿಕೊಂಡ ಮನವಿ ಪ್ರಕಾರ ಪ್ರೋಸಿಕ್ಯೂಶನ್ ಪರ ವಾದಿಸಲು ಸ್ಪೆಷಲ್ ಪ್ರೋಸಿಕ್ಯೂಟರನ್ನು ಸರಕಾರ ನೇಮಿಸಿತ್ತು. ಪೊಲೀಸ್ ತನಿಖೆ ಅತ್ಯಂತ ಪಾರದರ್ಶಕ ಹಾಗೂ ಸರಿಯಾದ ರೀತಿ ಯಲ್ಲೇ ನಡೆದಿತ್ತು. ಆ ಬಗ್ಗೆ ಯಾವುದೇ ದೂರುಗಳೂ ಉಂಟಾಗಿರಲಿಲ್ಲ. ತನಿಖೆ ಯಲ್ಲಿ ಸರಕಾರ ಪ್ರಾಮಾಣಿಕತೆ ತೋ ರಿದೆ. ಆರೋಪಿಗಳ ವಿರುದ್ಧ ಯುಎಪಿಎ ಹೇರಬೇಕೆಂಬ ಬೇಡಿಕೆ ಹೈಕೋರ್ಟ್‌ಗೆ ಬಿಟ್ಟುಕೊಡಲಾಗಿತ್ತು.  ಸರಿಯಾದ ರೀತಿಯಲ್ಲೇ ಈ ಪ್ರಕರಣದ ತನಿಖೆ ನಡೆದಿದ್ದು ಅಗತ್ಯದ ವೈಜ್ಞಾನಿಕ ಪುರಾವೆಗಳನ್ನೂ ಸಂಗ್ರಹಿಸಲಾಗಿತ್ತು. ಆದರೆ ಪ್ರೋಸಿಕ್ಯೂಶನ್‌ನ ವಾದ ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿ ಆರೋಪಿಗಳನ್ನು ನ್ಯಾಯಾಲಯ ಕೊನೆಗೆ ಖುಲಾಸೆಗೊಳಿಸಿ   ನೀಡಿದ ತೀರ್ಪು    ಬೆಚ್ಚುಬೀಳಿಸುವ ರೀತಿಯಲ್ಲಿ ಜನರು ಕಂಡಿದ್ದರು. ಆದರೆ ಈ  ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು. ಆ ಮೂಲಕ ಆರೋಪಿಗಳಿಗೆ ಶಿಕ್ಷೆ ಖಾತರಿಪಡಿಸುವಂತೆ ಮಾಡುವ ಕ್ರಮವನ್ನು ಸರಕಾರ ಇನ್ನೂ ಮುಂದುವರಿಸಲಿದೆಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page