ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡ ಹೈಕೋರ್ಟ್

ಕೊಚ್ಚಿ: ಕಾಸರಗೋಡು ಹಳೆಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ರಿಯಾಸ್ ಮೌಲವಿ (೨೮) ಕೊಲೆ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆಗಾಗಿ ಹೈಕೋರ್ಟ್‌ನ ವಿಭಾಗೀಯ ಪೀಠ ಕೈಗೆತ್ತಿಕೊಂಡಿದೆ.

ಮಾತ್ರವಲ್ಲ ಈ ಬಗ್ಗೆ ಪ್ರತಿವಾದಿಗಳಿಗೆ ಹೈಕೋರ್ಟ್ ಇದೇ ಸಂದರ್ಭದಲ್ಲಿ ನೋಟೀಸ್ ಜ್ಯಾರಿಗೊಳಿಸಿದೆ. ನ್ಯಾಯಮೂರ್ತಿ ಜಯ್‌ಶಂಕರ್ ನಂಬ್ಯಾರ್ ಮತ್ತು ನ್ಯಾಯಮೂರ್ತಿ ವಿ.ಎಂ. ಶ್ಯಾಂ ಕುಮಾರ್‌ರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮೇಲ್ಮನವಿ ಅರ್ಜಿಯನ್ನು ಸ್ವೀಕರಿಸಿದ್ದು, ಅದರ ವಿಚಾರಣೆ ಶೀಘ್ರ ಆರಂಭಗೊಳ್ಳುವ ಸಾಧ್ಯತೆ ಇದೆ.

ಕಾಸರಗೋಡು ಕೇಳುಗುಡ್ಡೆ ನಿವಾಸಿಗಳಾದ ಅಜೇಶ್ ಅಲಿಯಾಸ್ ಅಪ್ಪು, ನಿತಿನ್ ಕುಮಾರ್ ಅಲಿಯಾಸ್ ನಿತಿನ್ ಮತ್ತು ಕೇಳುಗುಡ್ಡೆ ಗಂಗೆ ನಗರದ ಅಖಿಲೇಶ್ ಅಲಿಯಾಸ್ ಅಖಿಲ್ ಈ ಪ್ರಕರಣದ ಆರೋಪಿಗಳಾಗಿದ್ದು, ಅವರ ಮೇಲಿನ ಆರೋಪಗಳನ್ನು ವಿಚಾರಣೆ ಯಲ್ಲಿ ಸಾಬೀತುಪಡಿಸಲು ಪ್ರೋಸಿ ಕ್ಯೂಶನ್‌ಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್ ೩೦ರಂದು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರಕಾರ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿ ಅರ್ಜಿಯನ್ನು ಸ್ವೀP ರಿಸಿದ ಹೈಕೋರ್ಟ್, ಖುಲಾಸೆಗೊಳಿ ಸಲ್ಪಟ್ಟ ಮೂವರು ಆರೋಪಿಗಳು ೧೦ ದಿನಗಳೊಳಗಾಗಿ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲ ಯದಲ್ಲಿ ನೇರವಾಗಿ ಹಾಜರಾಗಬೇಕು. ಮಾತ್ರವಲ್ಲ ೫೦,೦೦೦ ರೂ.ಗಳ ಸ್ವಂತ ಮುಚ್ಚಳಿಕೆ (ಬೋಂಡ್) ಮತ್ತು ಆ ಮೊತ್ತಕ್ಕೆ ಸಮಾನವಾದ ಇಬ್ಬರು ವ್ಯಕ್ತಿಗಳ ಜಾಮೀನನ್ನೂ ಮುಚ್ಚಳಿಕೆ ರೂಪದಲ್ಲಿ ಸಲ್ಲಿಸುವಂತೆಯೂ ಹೈಕೋರ್ಟ್ ಇದೇ ಸಂದರ್ಭದಲ್ಲಿ ನಿರ್ದೇಶ ನೀಡಿದೆ. ಇದನ್ನು ಪಾಲಿಸದೇ ಇದ್ದಲ್ಲಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆರೋಪಿಗಳಿಗೆ ಜಾಮೀನುರಹಿತ ವಾರಂಟ್ ಜ್ಯಾರಿಗೊಳಿಸಬೇಕು. ಮುಚ್ಚಳಿಕೆ ಸಮರ್ಪಿಸಿದ್ದಲ್ಲಿ ಜಿಲ್ಲಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಕ್ಕೆ ಹೋಗುವುದಿಲ್ಲ ಎಂಬ ನಿಬಂಧನೆಯಡಿ ಆರೋಪಿಗಳಿಗೆ  ಜಾಮೀನು ಮಂಜೂರು ಮಾಡಬಹುದೆಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.

೨೦೧೭ ಮಾರ್ಚ್ ೨೦ರಂದು ರಾತ್ರಿ ರಿಯಾಸ್ ಮೌಲವಿಯವರನ್ನು ಅವರ ಹಳೆಸೂರ್ಲಿನಲ್ಲಿರುವ ವಾಸಸ್ಥಳದಲ್ಲೇ ಇರಿದ ಬರ್ಬರವಾಗಿ  ಕೊಲೆಗೈಯ್ಯಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page