ರೈಲಿಗೆ ಮತ್ತೆ ಕಲ್ಲೆಸೆತ

ಕುಂಬಳೆ: ರೈಲಿಗೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳ ಅಟ್ಟಹಾಸ ಎಗ್ಗಿಲ್ಲದೆ ಇನ್ನೂ ಮುಂದುವರಿದಿದೆ. ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ನಿನ್ನೆ ರಾತ್ರಿ ಸುಮಾರು ೯ ಗಂಟೆ ವೇಳೆ ಕುಂಬಳೆ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ರೈಲಿನ ಬಾಗಿಲಿನ ಗಾಜಿಗೆ ತಗಲಿ ಅದು ಪುಡಿಗೈಯ್ಯಲ್ಪಟ್ಟಿದೆ. ಆದರೆ ಯಾರಿಗೂ ಗಾಯವುಂಟಾಗಿಲ್ಲ.  ಈ ಬಗ್ಗೆ ಕಾಸರಗೋಡು ರೈಲ್ವೇ ಪೊಲೀಸರು, ಕುಂಬಳೆ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ. ರೈಲುಗಳಿಗೆ ಪದೇ ಪದೇ ಕಲ್ಲು ತೂರಾಟ ನಡೆಸಿ ಪ್ರಯಾಣಿಕರಿಗೆ ಭೀತಿ ಸೃಷ್ಟಿಸತೊಡಗಿದೆ.

Leave a Reply

Your email address will not be published. Required fields are marked *

You cannot copy content of this page