ರೈಲು ಢಿಕ್ಕಿ ಹೊಡೆದು ವೃದ್ಧ ಮೃತ್ಯು
ಹೊಸದುರ್ಗ: ತೃಕರಿಪುರದಲ್ಲಿ ವೃದ್ಧ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಚಂದೇರ ನಿವಾಸಿ ಜೋಸ್ ರಾಜ್ (69) ಮೃತಪಟ್ಟವರು. ನಿನ್ನೆ ತೃಕರಿಪುರ ರೈಲ್ವೇ ಸ್ಟೇಷನ್ನ ಉತ್ತರ ಭಾಗದಲ್ಲಿ ಮೃತದೇಹ ಕಂಡು ಬಂದಿದೆ. ಚಂದೇರ ಪೊಲೀಸರು ಸ್ಥಳಕ್ಕೆ ತಲುಪಿ ಪಂಚನಾಮೆ ನಡೆಸಿದರು. ಮೃತದೇಹವನ್ನು ಕಣ್ಣೂರು ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ ವಿ.ವಿ. ಕಾರ್ತ್ಯಾಯಿನಿ, ಮಕ್ಕಳಾದ ವಿ.ವಿ. ರಾಜೇಶ್, ದಿನೇಶ್ರಾಜ್, ಸೊಸೆಯಂದಿರಾದ ಸಜೀಶ, ಜಿನ್ಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.