ರೈಲು ಬುಡಮೇಲು ಕೃತ್ಯಕ್ಕೆ ಯತ್ನ: ಫೋರೆನ್ಸಿಕ್ ಪುರಾವೆ ಲಭ್ಯ
ಕಾಸರಗೋಡು: ಕಳನಾಡು ರೈಲು ಸುರಂಗದ ಬಳಿ ರೈಲು ಹಳಿ ಮೇಲೆ ಕ್ಲೋಸೆಟ್‌ನ ತುಂಡುಗಳು ಮತ್ತು ಕಲ್ಲುಗಳನ್ನು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಫೋರೆನ್ಸಿಕ್ ತಜ್ಞರು ನಡೆಸಿದ ಸೂಕ್ಷ್ಮ ಪರಿಶೀಲ ನೆಯಲ್ಲಿ ಹಲವು ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾದ ಕ್ಲೋಸೆಟ್‌ಗಳ ತುಂಡಿನ ಬೆರಳಚ್ಚುಗಳನ್ನು ಗುರುತಿಸುವ ಯತ್ನವೂ ನಡೆಯುತ್ತಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರಿಸ ಲಾಗುವುದೆಂದು ಪೊಲೀಸರು ತಿಳಿ ಸಿದ್ದಾರೆ. ಅಲ್ಲೇ ಪಕ್ಕದ ಮನೆ ಯೊಂದರ ತ್ಯಾಜ್ಯ ವಸ್ತು ತಂದು ಹಾಕುವ ಸ್ಥಳದಿಂದ ಕ್ಲೋಸೆಟ್ ತುಂಡುಗಳನ್ನು ತಂದು ರೈಲು ಹಳಿ ಮೇಲೆ ಇರಿಸಲಾಗಿತ್ತು ಎಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ದುಷ್ಕೃತ್ಯವೆಸಗಿದವರನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡಕ್ಕೂ ರೂಪು ನೀಡಲಾಗಿದೆ. ತನಿಖೆಗಾಗಿ ಊರವರ ಸಹಾಯವನ್ನು ಪೊಲೀಸರು ಯಾಚಿಸಿದ್ದಾರೆ.