ರೈಲ್ವೇ ನಿಲ್ದಾಣಗಳಲ್ಲಿಳಿದು ಪೇಟೆ ಸುತ್ತಲು ಇ-ಸ್ಕೂಟರ್ ಸೌಕರ್ಯ: ಕಾಸರಗೋಡು ಸಹಿತ 20 ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ವಿವಿಧ ಸೌಲಭ್ಯಗಳು
ಕಾಸರಗೋಡು: ರೈಲ್ವೇ ನಿಲ್ದಾಣಗಳಲ್ಲಿ ಇಳಿದು ನಗರದ ವಿವಿಧೆಡೆಗಳಲ್ಲಿ ಸುತ್ತಾಡಬೇಕಾದರೆ ಪ್ರಯಾಣಿಕರಿಗೆ ಇನ್ನು ಮುಂದೆ ಬಾಡಿಗೆ ವಾಹನಗಳನ್ನು ಆಶ್ರಯಿಸ ಬೇಕಾಗಿಲ್ಲ. ಬದಲಾಗಿ ಹೀಗೆ ಸುತ್ತಾಡಬೇಕಾದವರಿಗೆ ರೈಲ್ವೇ ನಿಲ್ದಾಣಗಳಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೌಕರ್ಯ ಏರ್ಪಡಿ ಸಲಾಗುವುದು. ಕಾಸರಗೋಡು ಸೇರಿ ಪ್ರಮುಖ ಹದಿನೈದು ರೈಲ್ವೇ ನಿಲ್ದಾಣಗಳಲ್ಲಿ ರೈಲ್ವೇ ಇಲಾಖೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡಲಿದೆ. ಗಂಟೆಗಳು, ದಿವಸ ಲೆಕ್ಕದಲ್ಲಿ ಸ್ಕೂಟರ್ಗಳು ಬಾಡಿಗೆಗೆ ಲಭಿಸುವುದು. ಅವುಗಳನ್ನು ಬಾಡಿಗೆಗೆ ಇರಿಸಬೇಕಾದ ಸ್ಥಳವನ್ನು ರೈಲ್ವೇ ನಿರ್ಧರಿಸಲಿದೆ. ಈಗಾಗಲೇ ಇದರ ಗುತ್ತಿಗೆಯನ್ನು ಮಂಗಳೂರಿನಲ್ಲಿ ನೀಡ ಲಾಗಿದೆ. ವಾಹನ ಬಾಡಿಗೆಗೆ ಪಡೆಯಲು ಬರುವವರ ಆಧಾರ್ ಕಾರ್ಡ್, ಲೈಸನ್ಸ್ ಸಹಿತ ದಾಖಲೆ ಪತ್ರಗಳನ್ನು ಪರಿಶೀಲಿಸಿ ಸ್ಕೂಟರ್ಗಳನ್ನು ನೀಡಲಾಗುವುದು.
ಕಾಸರಗೋಡು ಜಿಲ್ಲೆಯ ಕಾಸರಗೋಡು, ಕಾಞಂಗಾಡ್ ರೈಲ್ವೇ ನಿಲ್ದಾಣಗಳಲ್ಲಿ ಈ ಸೌಕರ್ಯ ಜ್ಯಾರಿಗೆ ಬರಲಿದೆ. ಉಳಿದಂತೆ ಮಂಗಳೂರು ಜಂಕ್ಷನ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ಮಾಹಿ, ವಡಗರ, ಪರಪ್ಪನಂಗಾಡಿ, ಫರೋಕ್, ತಿರೂರು, ಕಲ್ಲಿಕೋಟೆ, ನಿಲಾಂಬೂರ್, ಒಟ್ಟಪಾಲಂ, ಪೊಳ್ಳಾಚಿ ಎಂಬೆಡೆಗಳಲ್ಲಿನ ರೈಲ್ವೇ ನಿಲ್ದಾಣಗಳಲ್ಲಿ ಇ-ಸ್ಕೂಟರ್ ಬಾಡಿಗೆಗೆ ದೊರಕಿಸುವ ವ್ಯವಸ್ಥೆ ಏರ್ಪಡಿಸಲಾಗುವುದು.
ಇದೇ ವೇಳೆ ರೈಲ್ವೇ ಪ್ಲಾಟ್ ಫಾಂಗಳಲ್ಲಿ ಇತರ ತುರ್ತು ಅಗತ್ಯಗಳನ್ನು ಏರ್ಪಡಿಸಲಾಗುವುದು. ಎಟಿಎಂ, ಡಿಜಿಟಲ್ ಲಾಕರ್, ಮಸಾಜ್ ಚೆಯರ್ ಸೌಕರ್ಯ ಏರ್ಪಡಿಸಲಾಗು ವುದು. ಪ್ಲಾಟ್ಫಾಂ ಗಳಲ್ಲಿ ಎಟಿಎಂ ಯಂತ್ರ ಶೀಘ್ರ ಏರ್ಪಡಿಸಲಾಗುವುದು. ಮಂಗಳೂರು ಸೆಂಟ್ರಲ್ನಿಂದ ಪೊಳ್ಳಾಚಿ ವರೆಗಿನ 20 ನಿಲ್ದಾಣಗಳಲ್ಲಿ ಇದಕ್ಕಾಗಿ ಟೆಂಡರ್ ಆಹ್ವಾನಿಸಲಾ ಗಿದೆ. ಮಸಾಜ್ ನಡೆಸಲು ಇಚ್ಚಿಸುವವ ರಿಗಾಗಿ ಕಲ್ಲಿಕೋಟೆ, ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಮಸಾಜ್ ಚೆಯರ್ ಕಾರ್ಯಾರಂಭ ಗೊಂಡಿದೆ. ಫರೋಕ್, ಒಟ್ಟಪಾಲಂ, ವಡಗರ, ಪಾಲಕ್ಕಾಡ್, ಪೊಳ್ಳಾಚಿ ಎಂಬೆಡೆ ಗಳಲ್ಲೂ ಮಸಾಜ್ ಚೆಯರ್ ಕಾರ್ಯಾಚರಿಸಲಿದೆ. ಲಗೇಜ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಭದ್ರವಾಗಿಡಲು ಪ್ಲಾಟ್ಫಾಂಗಳಲ್ಲಿ ಡಿಜಿಟಲ್ ಲಾಕರ್ ಕೂಡಾ ಸ್ಥಾಪಿಸಲು ನಿರ್ಧರಿಸಲಾಗಿದೆ.