ರೈಲ್ವೇ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ಆರೋಪಿಗೆ ರಿಮಾಂಡ್
ಮಂಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಮೇಲ್ಪರಂಬ ನಿವಾಸಿಗೆ ಹಲ್ಲೆಗೈದು ಗಾಯಗೊಳಿಸಿದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಉಪ್ಪಳ ಕೋಡಿಬೈಲು ನಿಯಾಸ್ ಮಂಜಿಲ್ನ ನಿಯಾಸ್ ಎ. (೩೩) ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ರೈಲ್ವೇ ಸೀಸನ್ ಟಿಕೆಟ್ ಪಡೆಯಲೆಂದು ಮೊನ್ನೆ ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ತಲುಪಿ ಕಳನಾಡು ಮೇಲ್ಪರಂಬ ಬಳಿಯ ಕೈನೋತ್ ನಿವಾಸಿ ಉಬೈದ್ (೫೨) ಎಂಬವರಿಗೆ ನಿಯಾಸ್ ಹೊಡೆದು ಗಾಯಗೊಳಿಸಿದ್ದನು. ಈ ಸಂಬಂಧ ನಿಯಾಸ್ ವಿರುದ್ಧ ಮಂಜೇಶ್ವರ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.