ರೋಟರಿ ಬದಿಯಡ್ಕದ ನೂತನ ಪದಾಧಿಕಾರಿಗಳ ಪದಗ್ರಹಣ

ಬದಿಯಡ್ಕ: ರೋಟರಿ ಬದಿಯಡ್ಕದ ನೂತನ ಪದಾದಿsಕಾರಿಗಳ ಪದಗ್ರಹಣ ಬದಿಯಡ್ಕ ವಳಮಲೆ ಇರಾ ಸಭಾ ಭವನದಲ್ಲಿ ಜರಗಿತು. ರೋಟರಿ ಬದಿಯಡ್ಕದ ನಿಕಟಪೂರ್ವ ಅಧ್ಯಕ್ಷ ಬಿ. ರಾಧಾಕೃಷ್ಣ ಪೈ ಮಾತನಾಡಿದರು.
ಚುನಾಯಿತ ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಮೇಜರ್ ಡೋನರ್ ಎಂ .ವಿ. ಮೋಹನದಾಸ್ ಮೆನನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ನಿಯುಕ್ತ ರೋಟರಿ ಕೋಶಾದಿsಕಾರಿ ರೋಟೇರಿಯನ್ ಬಿ. ಗೋಪಾಲಕೃಷ್ಣ ಕಾಮತ್ ನೂತನ ಸದಸ್ಯರ ಪರಿಚಯ ಮಾಡಿದರು. ರೋಟರಿ 3204 ಜಿಲ್ಲಾ ಸಹಾಯಕ ಗವರ್ನರ್ ರೊಟೇರಿಯನ್ ಹರೀಶ್ ವಿ. ವಿ. ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಕರಿಂಬಿಲ ನಾರಾಯಣ ಚೆಟ್ಟಿಯಾರ್‌ರಿಗೆ ರೋಟರಿ ಲಾಂಛನವನ್ನು ತೊಡಿಸಿದರು. ಉಪಾಧ್ಯಕ್ಷ ಶಿಬು ಜಾನ್ ಬದಿಯಡ್ಕ ರೋಟರಿಯ ನಿಯೋಜಿತ ನೂತನ ಅಧ್ಯಕ್ಷ ಬಿ.ಕೇಶವ ಪಾಟಾಳಿಯವರ ಕಿರು ಪರಿಚಯವನ್ನು ಮಾಡಿದರು. 2024 -25ನೇ ಸಾಲಿನ ಅಧ್ಯಕ್ಷರಾಗಿ ಅದಿsಕಾರ ವಹಿಸಿದ ಬಿ. ಕೇಶವ ಪಾಟಾಳಿಯವರು ಬದಿಯಡ್ಕ ರೋಟರಿ ಕ್ಲಬ್ ವತಿಯಿಂದ ರೋಟರಿ ಫೌಂಡೇಶನ್ ನಿಗೆ ರೂ 25000 ಗಳ ಚೆಕ್‌ಅನ್ನು ಹಸ್ತಾಂತರಿಸಿ ಕ್ಲಬ್‌ನ ಮುಂದಿನ ಕಾರ್ಯ ಯೋಜನೆಗಳನ್ನು ಪ್ರಸ್ತಾಪಿಸಿದರು. ಜಿಲ್ಲಾ 3204 ಸಂಯೋಜಕ ಕೆ. ರಾಧಾಕೃಷ್ಣನ್ ಕಾಸರಗೋಡು ಅವರು ವಿದ್ಯಾರ್ಥಿಗಳಿಗೆ ಕಲಿಕೋಪಕರಣ, ಪೀನ ದರ್ಪಣ, ಜೈವಿಕ ಲೇಖನಿಗಳನ್ನು ಶಾಲಾ ಮಕ್ಕಳಿಗೆ ವಿತರಿಸುವ ಕಾರ್ಯ ಯೋಜನೆಯನ್ನು ಉದ್ಘಾಟಿಸಿದರು. ಬದಿಯಡ್ಕ ಕ್ಲಬ್ ನ ರಚನೆಗೆ ಕಾರಣಕರ್ತರಾದ ವಿ. ಅನಿಲ್ ಕುಮಾರ್ ನೀಲೇಶ್ವರ್ ಅವರನ್ನು ಗೌರವಿಸಲಾಯಿತು. ಬಳಿಕ ವಿವಿಧ ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಗೈದ ವಿದ್ಯಾರ್ಥಿಗಳಾದ ಕುಮಾರಿ ಯತಿಕಾ, ಅನುರಾಗ್, ಕೌಶಿಕ್ ಹಾಗೂ ಕ್ರಿಸ್ ಜಾನ್ ರಿಗೆ ಶಾಶ್ವತ ಫಲಕವನ್ನಿತ್ತು ಗೌರವಿಸಲಾಯಿತು. ಮಾತೃ ಕ್ಲಬ್ ರೋಟರಿ ನೀಲೇಶ್ವರ ಹಾಗೂ ನೆರೆಯ ಕ್ಲಬ್‌ಗಳಾದ ಕಾಸರಗೋಡು, ಕಾಞಂಗಾಡು ರೋಟರಿ ಕ್ಲಬ್ ಗಳ ಪದಾದಿಕಾರಿಗಳು ಪಾಲ್ಗೊಂಡಿದ್ದರು.
ನಿಕಟಪೂರ್ವ ಕಾರ್ಯದರ್ಶಿ ವೈ. ರಾಘವೇಂದ್ರ ಪ್ರಸಾದ್ ನಾಯಕ್ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಿ. ಗುರುಪ್ರಸಾದ್ ಶೆಣೈ ಹಾಗೂ ಹನ್ನೆರಡು ಮಂದಿ ರೊಟೇರಿಯನ್ ಗಳನ್ನು ರೋಟರಿ ಲಾಂಛನವನ್ನು ತೊಡಿಸಿ ನಿಯುಕ್ತಗೊಳಿಸಲಾಯಿತು. ಪ್ರತೀಕ್ ಆಳ್ವಾ ಪೆರಡಾಲ ಸ್ವಾಗತಿಸಿದರು. ಯತಿಕಾ ಹಾಗೂ ಡೋನ್ ಮರಿಯಾ ನಿರೂಪಿಸಿದರು. ನೂತನ ಕಾರ್ಯದರ್ಶಿ ರಮೇಶ್ ಆಳ್ವಾ ಕಡಾರು ವಂದಿಸಿದರು. ಧನ್ವಿತಾ ಪ್ರಭುರವರ ಪೂಜಾ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ರೊಟೇರಿಯ ನ್ ಬಿ. ಗಣೇಶ್ ಪೈ ಪ್ರಾರ್ಥನೆಯನ್ನು ಹಾಡುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.

Leave a Reply

Your email address will not be published. Required fields are marked *

You cannot copy content of this page