ರೋಟರಿ ಬದಿಯಡ್ಕ ವತಿಯಿಂದ ಸ್ವಚ್ಛತಾ ಕಾರ್ಯ
ಬದಿಯಡ್ಕ: ಗಾಂ ಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯದ ಅಂಗವಾಗಿ ರೋಟರಿ ಕ್ಲಬ್ ಬದಿಯಡ್ಕದ ನೇ ತೃತ್ವದಲ್ಲಿ ಬದಿಯಡ್ಕ 14 ನೇ ವಾರ್ಡಿನ ಬೋ ಳುಕಟ್ಟೆಯಲ್ಲಿರುವ ಅಂಗನವಾಡಿ ಕೇಂದ್ರದ ಪರಿಸರವನ್ನು ನಿನ್ನೆ ಶುಚೀಕರಿಸಲಾಯಿತು. ರೋಟರಿ ಕ್ಲಬ್ನ ಅಧ್ಯಕ್ಷ ಬಿ ರಾಧಾಕೃಷ್ಣ ಪೈ, ಕೋಶಾಧಿಕಾರಿ ಕೇಶವ ಬಿ., ರೋಟರಿ ಸದಸ್ಯರು ಭಾಗವ ಹಿಸಿದರು. ಮಕ್ಕಳಿಗೆ ಬಿಸ್ಕತ್ತು ವಿತರಿಸಲಾ ಯಿತು. ಅಂಗನವಾಡಿ ಶಿಕ್ಷಕಿ ಸುಜಾತ ಕೃಷ್ಣ ಹಾಗೂ ಸಹಾಯಕಿ ಬೇಬಿ ಜಿ. ಕೃತಜ್ಞತೆ ಸಲ್ಲಿಸಿದರು. ರೋಟರಿ ಕಾರ್ಯ ದರ್ಶಿ ವೈ.ರಾಘವೇಂದ್ರ ಪ್ರಸಾದ್ ನಾಯಕ್ ವಂದಿಸಿದರು.