ಲಂಚ ಪಡೆಯುವ ನೌಕರರ ಪತ್ತೆಗೆ ವಿಜಿಲೆನ್ಸ್ ತೀವ್ರ ಕಾರ್ಯಾಚರಣೆ: ಒಂದೂವರೆ ತಿಂಗಳಲ್ಲಿ 16 ಮಂದಿ ಸೆರೆ
ಕಾಸರಗೋಡು: ಸರಕಾರಿ ಇಲಾಖೆಗಳಲ್ಲಿ ಲಂಚ ಪಡೆಯುವ ನೌಕರರ ಪತ್ತೆಗೆ ವಿಜಿಲೆನ್ಸ್ ಕಾರ್ಯಾಚರಣೆ ತೀವ್ರಗೊಳಿಸಿದೆ.
ರಾಜ್ಯದ ವಿವಿಧ ಕಚೇರಿಗಳಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಲಂಚಕ್ಕೆ ಸಂಬಂಧಿಸಿ 16 ಮಂದಿಯನ್ನು ಸೆರೆಹಿಡಿಯಲಾಗಿದೆ. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ತಿಂಗಳಲ್ಲಿ ಒಂಭತ್ತು ಮಂದಿ ಸೆರೆಗೀ ಡಾಗಿದ್ದಾರೆ. ಹೀಗೆ ಸೆರೆಗೀಡಾದವರಲ್ಲಿ ಹೆಚ್ಚಿನವರು ಕಂದಾಯ ಇಲಾಖೆ ನೌಕರರೇ ಆಗಿದ್ದಾರೆಂದೂ ವಿಜಿಲೆನ್ಸ್ ತಿಳಿಸಿದೆ. ಜನವರಿಯಲ್ಲಿ ಲಂಚವಾಗಿ ಪಡೆದ 48,೦೦೦ ರೂಪಾಯಿಗಳನ್ನು ವಿಜಿಲೆನ್ಸ್ ವಶಪಡಿಸಿದೆ.
ಕಳೆದ ವರ್ಷ ಲಂಚ ಪಡೆದ ಆರೋಪದಂತೆ 39 ಮಂದಿ ನೌಕರರನ್ನು ಸೆರೆಹಿಡಿಯಲಾಗಿದೆ. ಈ ಪೈಕಿ 16 ಮಂದಿ ಕಂದಾಯ ಇಲಾಖೆಯವ ರಾಗಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಯ 6 ಮಂದಿ ಸೆರೆಗೀಡಾಗಿದ್ದಾರೆ. ಕಳೆದ ವರ್ಷ ಒಟ್ಟು 7.43 ಲಕ್ಷ ರೂಪಾಯಿ ಲಂಚ ಮೊತ್ತವನ್ನು ವಶಪಡಿಸ ಲಾಗಿದೆ. ಈ ವರ್ಷ ಡ್ರೈವಿಂಗ್ ಸ್ಕೂಲ್‌ಗೆ ಸಂಬಂಧಿಸಿ ಇಬ್ಬರು ಏಜೆಂಟ್‌ಗಳನ್ನು ಬಂಧಿಸಲಾಗಿದೆ.